ಓಲೆಮುಂಡೋವು: ಕಾಡಾನೆ ಪ್ರತ್ಯಕ್ಷ
ಪುತ್ತೂರು: ಕೆಯ್ಯೂರು ಗ್ರಾಮದ ಓಲೆಮುಂಡೋವು ಪ್ರದೇಶದಲ್ಲಿ ಕಾಡಾನೆ ಸಂಚರಿಸಿದ್ದು ಸ್ಥಳೀಯ ಜನತೆ ಭಯ ಭೀತರಾಗಿದ್ದಾರೆ.
ಆನೆ ದಾಳಿಯಿಂದಾಗಿ ಅಲ್ಲಲ್ಲಿ ಬೆಳೆ ನಾಶ, ಕೃಷಿ ನಷ್ಟ ಸಂಭವಿಸಿದೆ. ಹಲವಾರು ಬಾಳೆಗಿಡಗಳು ನೆಲಸಮವಾಗಿದ್ದು ಆನೆಯ ಹೆಜ್ಜೆಯ ಗುರುತುಗಳು ಅಲ್ಲಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಓಲೆಮುಂಡೋವು ಪ್ರದೇಶದಲ್ಲಿ ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರು ಸೇರಿದ್ದಾರೆ.