ಮಂಗಳೂರು: ಬೈಕ್ ಅಪಘಾತ- ಉಪ್ಪಿನಂಗಡಿ ಮೂಲದ ಯುವಕ ಸಹಿತ ಇಬ್ಬರು ಮೃತ್ಯು
ಮಂಗಳೂರು: ಬೈಕ್ ಅಪಘಾತವಾಗಿ ಇಬ್ಬರು ಸವಾರರು ಮೃತಪಟ್ಟ ಘಟನೆ ಯೆಯ್ಯಾಡಿ ಸಮೀಪದ ಹರಿಪದವು ಎಂಬಲ್ಲಿ ಸೆ.5ರ ಗುರುವಾರ ತಡರಾತ್ರಿ ನಡೆದಿದೆ.
ಉಪ್ಪಿನಂಗಡಿ ಸಮೀಪದ ರಾಮಕುಂಜದ ಚೇತನ್(24) ಮತ್ತು ಕೋಡಿಕಲ್ ನ ಕಾಶೀನಾಥ್(17) ಮೃತಪಟ್ಟವರು. ಲಾರಿಯೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ನಿಯಂತ್ರಣ ಕಳೆದುಕೊಂಡು ಬೈಕ್ ನಿಂದ ಬಿದ್ದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.