ಈಡನ್ ಗ್ಲೋಬಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
ಪುತ್ತೂರು: ಬೆಳಂದೂರು ಈಡನ್ ಗ್ಲೋಬಲ್ ಶಾಲೆಯಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಶಾಲೆಯ ಪ್ರಾಂಶುಪಾಲರಾದ ರಂಝೀ ಮುಹಮ್ಮದ್ ಅತಿಥಿಗಳನ್ನು ಸ್ವಾಗತಿಸಿದರು. ಮಕ್ಕಳು ತಮ್ಮ ಹಾಡು, ಭಾಷಣಗಳ ಮೂಲಕ ತಮ್ಮ ಪರಿಸರ ಪ್ರೇಮವನ್ನು ತೋರ್ಪಡಿಸಿದರು.
ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅಕ್ಷಯ್ ಆಳ್ವ (ಪ್ರಗತಿ ಪರ ಕೃಷಿಕರು ಅಲೆಕ್ಕಾಡಿ) ಮಕ್ಕಳನ್ನು ಉದ್ದೇಶಿಸಿ ಮಾತನಾಡಿ ಮಕ್ಕಳಿಗೆ ಪರಿಸರದ ಉಳಿವಿನ ಬಗ್ಗೆ ಜಾಗೃತಿ ಮೂಡಿಸಿದರು. ಅಲ್ಲದೇ 100 ವಿವಿಧ ಜಾತಿಯ ಸಸಿಗಳನ್ನು ಶಾಲೆಗೆ ದಾನವಾಗಿ ನೀಡಿದರು. ಇದೇ ಸಂದರ್ಭದಲ್ಲಿ ಶಾಲೆಯ ವತಿಯಿಂದ ಅಕ್ಷಯ್ ಆಳ್ವರನ್ನು ಗೌರವಿಸಲಾಯಿತು. ಇಕೋ ಕ್ಲಬಿನ ಕಾರ್ಡಿನೇಟರ್ ಗಳಾದ ಶ್ರೀಮತಿ ಅಮೃತಾ ನಾಯ್ಕ್ ಮತ್ತು ಕುಮಾರಿ ಸುಚಿತ್ರ ವಿಶ್ವ ಪರಿಸರ ದಿನದ ಅಂಗವಾಗಿ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿದ್ದರು. ನಂತರ ಶಿಕ್ಷಕಿ ಕುಮಾರಿ ಫಾತಿಮಾ ಅಮ್ನಾಝ್ ಮಕ್ಕಳಿಗೆ ಪರಿಸರದ ದಿನದ ಸಂದೇಶವನ್ನು ನೀಡಿದರು. ನಂತರ ಆಡಳಿತ ಸಮಿತಿಯ ಸದಸ್ಯರಾದ ಪುತ್ತು ಬಾವ ಹಾಜಿ ಶಾಲಾ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸೇರಿ ಶಾಲೆಯಲ್ಲಿ ವಿವಿಧ ಸಸಿಗಳನ್ನು ನೆಟ್ಟು ಹಸಿರು ಬೆಳೆಸುವ ಕಾರ್ಯಕ್ಕೆ ಚಾಲನೆ ನೀಡಿದರು.