ರಾಜಕೀಯರಾಷ್ಟ್ರೀಯ

ಲೋಕಸಭಾ ಚುನಾವಣೆ: ಮತದಾನೋತ್ತರ ಸಮೀಕ್ಷೆ ಇಲ್ಲಿದೆ 



ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಮುಕ್ತಾಯವಾಗುತ್ತಿದ್ದಂತೆ ಎಕ್ಸಿಟ್ ಪೋಲ್‌ಗಳು ಭವಿಷ್ಯ ಹೇಳಿದೆ. ಎರಡು ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ, ಇಂಡಿಯಾ ಒಕ್ಕೂಟ 125-150 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ.

ಜನ್ ಕಿ ಬಾತ್‌ನ ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಗೆ 362-392 ಸೀಟು ಸಿಗಬಹುದು ಎಂದು ಹೇಳಲಾಗಿದೆ. ಇಂಡಿಯಾ ಮೈತ್ರಿಕೂಟಕ್ಕೆ 141-161 ಸ್ಥಾನಗಳು ಸಿಗಬಹುದು ಎಂದು ಹೇಳಲಾಗಿದೆ. ಇಂಡಿಯಾ ನ್ಯೂಸ್-ಡಿ ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಎನ್‌ಡಿಎ 371 ಸ್ಥಾನಗಳನ್ನು ಮತ್ತು ಇಂಡಿಯಾ ಬಣ 125 ಸ್ಥಾನಗಳನ್ನು ಪಡೆಯಬಹುದು. ರಿಪಬ್ಲಿಕ್ ಟಿವಿ- P MARQ ಎನ್‌ಡಿಎಗೆ 359 ಮತ್ತು ಇಂಡಿಯಾ ಬಣಕ್ಕೆ 154 ಸೀಟುಗಳು ಸಿಗಬಹುದು ಎಂದು ಹೇಳಿದೆ. ಆದರೆ ಈ ಸಮೀಕ್ಷೆಗಳ ಸ್ಪಷ್ಟ ಚಿತ್ರಣ ಜೂನ್ 4ರಂದು ಸಿಗಲಿದೆ.

Leave a Reply

Your email address will not be published. Required fields are marked *

error: Content is protected !!