ಕೊಚ್ಚಿಯಲ್ಲಿ ರಸ್ತೆ ಅಪಘಾತ: ಸುಳ್ಯ ಮೂಲದ ಯುವಕ ಮೃತ್ಯು
ಸುಳ್ಯ: ಕೇರಳದ ಕೊಚ್ಚಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಸುಳ್ಯ ಮೂಲದ ಯುವಕನೋರ್ವ ಮೃತಪಟ್ಟ ಘಟನೆ ಅ.11ರಂದು ವರದಿಯಾಗಿದೆ. ಕನಕಮಜಲಿನ ಸುಣ್ಣಮೂಲೆ ಪೆಲಡ್ಡ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಇಯಾಝ್ (24) ಮೃತಪಟ್ಟ ಯುವಕ.

ಇವರು ಕೆಲ ಸಮಯದಿಂದ ಕೊಚ್ಚಿಯಲ್ಲಿ ಕೆಲಸದಲ್ಲಿದ್ದು ಸ್ಕೂಟರ್‌ನಲ್ಲಿ ತೆರಳುತ್ತಿರುವಾಗ ಕಾರು ಢಿಕ್ಕಿಯಾಗಿದೆ. ಪರಿಣಾಮ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಇಯಾಝ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿ ರುವುದಾಗಿ ತಿಳಿದು ಬಂದಿದೆ. ಮೃತರು ತಂದೆ, ತಾಯಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

