ಕರಾವಳಿ

ಪುತ್ತೂರು- ಉಪ್ಪಿನಂಗಡಿ ರಸ್ತೆ ದುರಸ್ಥಿಗೆ ಶಾಸಕ ಅಶೋಕ್ ರೈ ಸೂಚನೆ

ಪುತ್ತೂರು: ಪುತ್ತೂರು – ಉಪ್ಪಿನಂಗಡಿ ರಸ್ತೆಯ ಕೆಲವು ಕಡೆಗಳಲ್ಲಿ ಹೊಂಡಗಳ ಸೃಷ್ಟಿಯಾಗಿದ್ದು ತಕ್ಷಣ ದುರಸ್ಥಿ ಕಾರ್ಯ ನಡೆಸುವಂತೆ ಶಾಸಕ ಅಶೋಕ್ ರೈ ಅವರು ಲೋಕೋಪಯೋಗಿ ಇಂಜಿನಿಯರ್ ಗೆ ಸೂಚನೆ ನೀಡಿದ್ದಾರೆ.

ಮಳೆಯ ಕಾರಣಕ್ಕೆ ಪುತ್ತೂರು ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ, ದಾರಂದಕುಕ್ಕು ಸೇರಿದಂತೆ ಎರಡು ಮೂರು ಕಡೆಗಳಲ್ಲಿ ರಸ್ತೆಯಲ್ಲಿ ಸಣ್ಣ ಸಣ್ಣ ಹೊಂಡಗಳ ಸೃಷ್ಟಿಯಾಗಿದ್ದು ಅದನ್ನು ಮುಚ್ಚುವುದು ಮತ್ತು ಎಲ್ಲೆಲ್ಲಿ ರಸ್ತೆಗಳಲ್ಲಿ ಹೊಂಡಗಳಿವೆಯೋ ಅವುಗಳಿಗೆ ತೇಪೆ ಹಾಕುವ ಕೆಲಸ ತುರ್ತಾಗಿ ಮಾಡಬೇಕೆಂದು ಶಾಸಕರು ಇಂಜಿನಿಯರ್ ಗೆ ಸೂಚನೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!