ಪೆರುವಾಯಿ ಗ್ರಾಮ: ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ
ವಿಟ್ಲ: ಜೆಸಿಬಿ, ಹಿಟಾಚಿ ಇಲ್ಲದ ಕಾಲದಲ್ಲಿ ದೇಶದಲ್ಲಿ ಕೋಟಿಗಟ್ಟಲೆ ಕಿ ಮೀ ರಸ್ತೆ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಅಲ್ಲವೇ? ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುವವರೊಮ್ಮೆ ಕಣ್ತೆರೆದು ನೋಡಬೇಕು ಎಂದು ಶಾಸಕರಾದ ಅಶೋಕ್ ರೈ ಹೇಳಿದರು.

ಪೆರುವಾಯಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಶಾಸಕರು ದೇಶದಲ್ಲಿ ಇಲ್ಲಿಯ ತನಕ ಅಭಿವೃದ್ದಿಯಾಗಿದ್ದರೆ ಅದಕ್ಕೆ ಕಾಂಗ್ರೆಸ್ ಸರಕಾರವೇ ಕಾರಣವಾಗಿದೆ ಎಂದು ಹೇಳಿದರು.
ಯಾವುದೇ ದೇಶ ಒಬ್ಬ ವ್ಯಕ್ತಿಯಿಂದ ನಡೆಯುವುದಲ್ಲ. ಅಧಿಕಾರ ನಡೆಸುವ ಶಕ್ತಿ ಪ್ರತೀಯೊಬ್ಬರಲ್ಲೂ ಇದೆ ಎಂದು ಹೇಳಿದರು.
ಕರ್ನಾಟಕ ಸರಕಾರ ಬಂದ ಬಳಿಕ ಜನರ ಖಾತೆ ತುಂಬಿ ಹೋಗಿದೆ. ಝೀರೋ ಬ್ಯಾಲೆನ್ಸ್ ಅಕೌಂಟ್ ಮಾಡಿಸಿದವರು ಒಂದು ರೂ ಬಡವನ ಖಾತೆಗೆ ಕೊಟ್ಟಿಲ್ಲ. ಖಾತೆಯನ್ನು ತುಂಬಿಸಿದ್ದು ಕಾಂಗ್ರೆಸ್ ಸರಕಾರವಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ,ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್, ಡಿಸಿಸಿ ಪ್ರ.ಕಾರ್ಯದರ್ಶಿ ಮುರಳೀದರ್ ರೈ ಮಟಂತಬೆಟ್ಟು, ಗ್ಯಾರಂಟಿಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ ಪೆರ್ನೆ, ನೂರುದ್ದೀನ್ ಸಾಲ್ಮರ, ಸುಭಾಶ್ಚಂದ್ರ ಶೆಟ್ಟಿ,ಪೆರುವಾಯಿ ವಲಯ ಕಾಂಗ್ರೆಸ್ ಅಧ್ಯಕ್ಷ ರಾಜೇಂದ್ರನಾಥ ರೈ, ಗ್ರಾಪಂ ಅಧ್ಯಕ್ಷೆ ನೆಬಿಸಾ, ಗ್ರಾಪಂ ಸದಸ್ಯರುಗಳಾದ ರಶ್ಮಿ, ಮಾಲತಿ,ರಂಜಿತ್ ಮಾರ್ಲ, ಗೋಪಾಲಕೃಷ್ಣ, ಸಿದ್ದಿಕ್ ಪೆರುವಾಯಿ ಮೊದಲಾದವರು ಇದ್ದರು.