ಕುಂಬ್ರ ಮರ್ಕಝ್ ನಲ್ಲಿ ಅಗಲಿದ ಫಾತಿಮತ್ ರಫಾ ಸ್ಮರಣಾರ್ಥ ಇಫ್ತಾರ್ ಮೀಟ್, ಪ್ರಾರ್ಥನಾ ಸಂಗಮ
ಫಾತಿಮತ್ ರಫಾಳಿಗೆ ಅಲ್ಲಾಹನು ಕರುಣುಸಿದ್ದು ಇಪ್ಪತ್ತು ವರ್ಷಗಳ ಆಯುಷ್ಯ. ಹ್ರಸ್ವ ಅವಧಿಯಲ್ಲಿ ನಮ್ಮ ಸಂಸ್ಥೆಯಲ್ಲಿ ಆಕೆ ಗಳಿಸಿದ ಹೆಸರು ಮರಣಾ ನಂತರವೂ ಜೀವಂತವಾಗಿರುದನ್ನು ನಾವು ಕಂಡೆವು. ಆಕೆ ಡಿಗ್ರಿ ಪಡೆಯಲು ಮರ್ಕಝ್ ಸಂಸ್ಥೆಯನ್ನು ಆಯ್ಕೆ ಮಾಡಿದ ಕಾರಣ ಇಂದು ಲಕ್ಷಾಂತರ ಮರ್ಕಝ್ ಕುಟುಂಬ ಆಕೆಗಾಗಿ ಪ್ರಾರ್ಥನೆ ಸಲ್ಲಿಸಿದೆ. ನೂರಾರು ಖತಂ ಅರ್ಪಿತವಾಗಿದೆ.ಬಹಳಷ್ಟು ದೊಡ್ಡ ವಿದ್ವಾಂಸರ ಸಹಿತ ಹಲವು ಸಜ್ಜನರ ಪ್ರಾರ್ಥನೆ ಲಭಿಸಲು ಕಾರಣವಾಗಿದೆ ಎಂದು ಸಂಸ್ಥೆಯ ಉಪಾದ್ಯಕ್ಷ ಡಾ, ಎಂಎಸ್ ಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿಯವರು ಹೇಳಿದರು.
ಇತ್ತೀಚೆಗೆ ಅಗಲಿದ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪದವಿ ವಿಭಾಗದ ವಿದ್ಯಾರ್ಥಿನಿ ಯಾಗಿದ್ದ ರಫಾರವರ ಹೆಸರಿನಲ್ಲಿ ಕಾಲೇಜು ಕ್ಯಾಂಪಸ್ ನಲ್ಲಿ ನಡೆದ ಅನುಸ್ಮರಣೆ, ಪ್ರಾರ್ಥನಾ ಮಜ್ಲಿಸ್ ಮತ್ತು ಇಫ್ತಾರ್ ಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಫಾರವರು ನಮ್ಮ ಸಂಸ್ಥೆಗೆ ಸೇರ್ಪಡೆಗೊಳ್ಳುವ ಮೂಲಕ ಮರಣಾ ನಂತರವೂ ಜಗಜ್ಜಾಹೀರಾದಳು ಎಂದು ಝೈನಿ ಕಾಮಿಲ್ ಸಖಾಫಿ ಹೇಳಿದರು.
ಕಾರ್ಯಕ್ರಮವನ್ನು ಪ್ರಾರ್ಥನೆ ನಡೆಸುವ ಮೂಲಕ ಮರ್ಕಝ್ ಕುಂಬ್ರ ಇದರ ಶರೀಅ ಮುದರ್ರಿಸ್ ಜಲೀಲ್ ಸಖಾಫಿಯವರು ಉದ್ಘಾಟನೆ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿಯವರು ವಹಿಸಿದ್ದರು. ಯಾಸೀನ್ ಪಾರಾಯಣ,ತಹ್ಲೀಲ್ ಸಮರ್ಪಣೆ,ಖತಂ ಹದ್ಯಾ,ಇಸ್ತಿಗ್ಫಾರ್ , ಇಫ್ತಾರ್ ಸಹಿತ ಹಲವು ಆದ್ಯಾತ್ಮಿಕ ಕಾರ್ಯಗಳು ರಫಾಳ ಹೆಸರಲ್ಲಿ ನಡೆದು ರಫಾಳ ಪಾರತ್ರಿಕ ಮೋಕ್ಷಕ್ಕಾಗಿ ಪ್ರಾರ್ಥಿಸಲಾಯ್ತು. ಇದರ ನೇತ್ರತ್ವವನ್ನು ಝೈನಿಯವರು ವಹಿಸಿದರು.
ಕಾರ್ಯಕ್ರಮದಲ್ಲಿ ಬೆಳ್ಳಾರೆ ದಾರುಲ್ ಹಿಕ್ಮಾದ ಹಸನ್ ಸಖಾಫಿ,ಮರ್ಕಝ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ, ಕೋಶಾಧಿಕಾರಿ ಸಾಜ ಯೂಸುಫ್ ಗೌಸಿಯಾ, ರಫಾ ಕುಟುಂಬದ ಪ್ರಮುಖರಾದ ಮಹಮೂದ್ ಬೆಳ್ಳಾರೆ,ಸಂಸ್ಥೆಯ ಯೂಸುಫ್ ಮೈದಾನಿಮೂಲೆ,ಕರೀಂ ಕಾವೇರಿ ,ಪದವಿ ವಿಭಾಗದ ಶರೀಅ ಮುದರ್ರೀಸ್ ಸ್ವಾಲಿಹ್ ಹನೀಫಿ,ಶರೀಅ ಮುದರ್ರೀಸ್ ಅಬ್ದುರ್ರಹ್ಮಾನ್ ಸಖಾಫಿ ಅರಿಕ್ಕಿಲ,ಪದವಿ ವಿಭಾಗದ ಪ್ರಾಂಶುಪಾಲರಾದ ಮನ್ಸೂರ್ ಕಡಬ,ಮರ್ಕಝ್ ಅಕಾಡೆಮಿಕ್ ಆಫ್ ಥಿಯೋಲಜಿ ವ್ಯವಸ್ಥಾಪಕ ಇಬ್ರಾಹಿಂ ಖಲೀಲ್ ಮಾಲಿಕಿ,ರಫಾ ಕುಟುಂಬದ ಹಲವು ಸದಸ್ಯರು ಮತ್ತು ಸಂಸ್ಥೆಯ ಸಿಬ್ಬಂದಿಗಳು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು ಎಂದು ಮೀಡಿಯಾ ಮರ್ಕಝ್ ಕುಂಬ್ರ ಪ್ರಕಟಣೆಯಲ್ಲಿ ತಿಳಿಸಿದೆ.