ಅನಾರೋಗ್ಯ ಪೀಡಿತ ಕಾರ್ಮಿಕನ ಮನೆಗೆ ತೆರಳಿ ಆರೋಗ್ಯ ವಿಚಾರಿಸಿ ನೆರವು ನೀಡಿದ ಶಾಸಕ ಅಶೋಕ್ ರೈ
ಅನಾರೋಗ್ಯ ಪೀಡಿತ ಕಾರ್ಮಿಕಗೆ ಶಾಸಕರಿಂದ ನೆರವು
ಪುತ್ತೂರು: ಕಳೆದ ಕೆಲವು ತಿಂಗಳಿಂದ ಅನಾರೋಗ್ಯ ಪೀಡಿತರಾಗಿ ಮನೆಯಲ್ಲಿ ಹಾಸಿಗೆ ಹಿಡಿದ ಕೂಲಿ ಕಾರ್ಮಿಕ ಬನ್ನೂರು ಗ್ರಾಮದ ಅಡಚಿಲಡ್ಕ ನಿವಾಸಿ ನಾರಾಯಣ ಎಂಬವರ ಮನೆಗೆ ಶಾಸಕರು ಜು.24 ರಂದು ರಾತ್ರಿ ಭೇಟಿ ನೀಡಿದರು.

ಮೇಸ್ತ್ರಿ ಕೆಲಸ ಮಾಡುತ್ತಿದ್ದ ನಾರಾಯಣರವರಿಗೆ ದಿಡೀರನೆ ಅನಾರೋಗ್ಯ ಕಾಣಿಸಿಕೊಂಡಿದೆ. ಕಡುಬಡತನದ ಈ ಕುಟುಂಬಕ್ಕೆ ಇವರೇ ಆಧಾರಸ್ತಂಬವಾಗಿದ್ದರು. ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಕುಟುಂಬದ ಸಂಕಷ್ಟದ ಬಗ್ಗೆ ಶಾಸಕರಿಗೆ ತಿಳಿಸಿದ್ದರು. ಸೋಮವಾರ ರಾತ್ರಿ ಮನೆಗೆ ಭೇಟಿ ನೀಡಿದ ಶಸಕರು ಆರ್ಥಿಕ ನೆರವು ನೀಡಿದರು. ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರು ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.