ಸುಳ್ಯ: ಪಾಲ ದಾಟುತ್ತಿರುವ ವೇಳೆ ವ್ಯಕ್ತಿ ನೀರು ಪಾಲು
ಸ್ಥಳಕ್ಕೆ ಅಗ್ನಿ ಶಾಮಕದಳ, ಪೊಲೀಸರ ದೌಡು
ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಅವಘಡಗಳು ಹೆಚ್ಚಾಗಿದೆ. ಸುಳ್ಯ ತಾಲೂಕಿನ ಆಲೆಟ್ಟಿಯ ಕೂರ್ನಡ್ಕ ಬಳಿ
ನದಿಯ ಪಾಲ ದಾಟುತ್ತಿರುವ ಸಂದರ್ಭದಲ್ಲಿ ವ್ಯಕ್ತಿಯೊರ್ವರು ಆಯ ತಪ್ಪಿ ಬಿದ್ದು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಇದೀಗ ವರದಿಯಾಗಿದೆ.

ನದಿ ನೀರು ಪಾಲಾದ ವ್ಯಕ್ತಿ ಕೇರಳ ಮೂಲದವರು ಎಂದು ಸಂಶಯಿಸಲಾಗಿದ್ದು ತೋಟದಲ್ಲಿ ಕೂಲಿ ಕೆಲಸ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಸುಳ್ಯ ಅಗ್ನಿ ಶಾಮಕ ದಳದವರು ಹಾಗೂ ಪೋಲಿಸ್ ಅಧಿಕಾರಿಗಳು ಭೇಟಿ ನೀಡಿದ್ದು ವ್ಯಕ್ತಿಯ ಹುಡುಕಾಟವನ್ನು ಆರಂಭಿಸಿದ್ದಾರೆ ಎನ್ನಲಾಗಿದೆ.