ಬಂಟ್ವಾಳ: ಗಾಂಜಾ ನಶೆಯಲ್ಲಿದ್ದ ಯುವಕನ ಬಂಧನ
ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಮಾಧಕ ವಸ್ತುವನ್ನು ಸೇವಿಸಿ ನಶೆಯಲ್ಲಿ, ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ದಿನಾಂಕ ಎ.5ರಂದು ಬಂಟ್ವಾಳ ತಾಲೂಕಿನ ಪುದು ಗ್ರಾಮದ, ಕುಂಪನಮಜಲು ಎಂಬಲ್ಲಿ ನಡೆದಿದೆ.

ಈ ಬಗ್ಗೆ ಮಾಹಿತಿ ಬಂದ ಮೇರೆಗೆ, ಠಾಣಾ ಪಿ.ಎಸ್.ಐ ಹರೀಶ್ ಎಮ್ ಆರ್ ರವರು ಸಿಬ್ಬಂದಿಗಳೊಂದಿಗೆ ತೆರಳಿ, ನಶೆಯಲ್ಲಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ ಆತನ ಹೆಸರು ಮಹಮ್ಮದ್ ಮುಸ್ತಫಾ ಕೆ (34ವ) ಎಂದು ತಿಳಿದು ಬಂದಿದೆ. ಆತ ಮಾದಕವಸ್ತು ಸೇವಿಸಿರುವ ಬಗ್ಗೆ ಅನುಮಾನಗೊಂಡು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು ಈ ವೇಳೆ ಆತ ಮಾದಕವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುತ್ತದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.