ಪುತ್ತೂರು|ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಮಹಿಳೆ
ಪುತ್ತೂರು: ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಪುತ್ತೂರು ನಗರದ ಚಿಕ್ಕಪುತ್ತೂರಿನಲ್ಲಿ ಜೂ. 15ರ ರಾತ್ರಿ ವರದಿಯಾಗಿದೆ. ಮೃತರು ತುಂಬು ಗರ್ಭಿಣಿಯಾಗಿರುವ ರೇಷ್ಮಾ ಎಂದು ತಿಳಿದು ಬಂದಿದೆ.

ಚಿಕ್ಕಪುತ್ತೂರಿನ ನಿವಾಸಿ, ಚಿಂತನ್ ಅವರ ಪತ್ನಿ ರೇಷ್ಮಾ (28) ಏಳು ತಿಂಗಳ ಗರ್ಭಿಣಿಯಾಗಿದ್ದು ತಾವು ವಾಸವಿದ್ದ ಬಾಡಿಗೆ ಮನೆಯಲ್ಲಿ ಅವರು ನೇಣಿಗೆ ಶರಣಾಗಿದ್ದಾರೆ.
ಪತಿ, ಪುತ್ರಿಯನ್ನು ಅಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.