ಮಾಣಿ: ಸಿಡಿಲು ಬಡಿದು ಹೊತ್ತಿ ಉರಿದ ತೆಂಗಿನ ಮರ
ಬಂಟ್ವಾಳ: ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಬೆಂಕಿ ಕಾಣಿಸಿಕೊಂಡ ಘಟನೆ ಮಾಣಿ ಸಮೀಪದ ಬುಡೋಳಿ ಜಂಕ್ಷನ್ ನಲ್ಲಿ ಅ. 29ರಂದು ಸಂಜೆ ನಡೆದಿದೆ.
ಸಿದ್ದೀಕ್ ಎಂಬವರ ಮನೆಯಂಗಳದಲ್ಲಿ ಇರುವ ತೆಂಗಿನ ಮರಕ್ಕೆ ಸಿಡಿಲು ಸಿಡಿಲು ಬಡಿದ ಪರಿಣಾಮ ತೆಂಗಿನ ಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದಲ್ಲದೆ, ಮರ ಸುಟ್ಟು ಹೋಗಿದೆ.
ಮನೆಯಂಗಳದಲ್ಲಿ ತೆಂಗಿನ ಮರ ಇದೆಯಾದರೂ ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಅಪಾಯವಾಗಿಲ್ಲ.
ಸಿಡಿಲು ಬಡಿದ ಕೂಡಲೇ ತೆಂಗಿನಮರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದನ್ನು ಸ್ಥಳೀಯರು ತಮ್ಮ ಕ್ಯಾಮರಾ ಮೂಲಕ ವಿಡಿಯೋ ಚಿತ್ರೀಕರಿಸಿದ್ದಾರೆ.