ಬೆಳ್ತಂಗಡಿ: ಸುಡುಮದ್ದು ಘಟಕದಲ್ಲಿ ಸ್ಫೋಟ: ಮಾಲೀಕ ಸೈಯದ್ ಬಶೀರ್ ಪೊಲೀಸ್ ವಶಕ್ಕೆ
ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಗೋಳಿಯಂಗಡಿ ಕಡ್ತ್ಯಾರ್ ಎಂಬಲ್ಲಿ ಜ.28ರಂದು ಸುಡುಮದ್ದು ಘಟಕದಲ್ಲಿ ನಡೆದ ಸ್ಫೋಟದಲ್ಲಿ ಮೂವರ ದೇಹಗಳು ಛಿದ್ರ ಛಿದ್ರವಾಗಿದ್ದು ಘಟನೆಯ ನಂತರ ಪರಾರಿಯಾಗಿದ್ದ ಸುಡುಮದ್ದು ಘಟಕದ ಮಾಲೀಕ ಸೈಯದ್ ಬಶೀರ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಶೀರ್ ವಶಕ್ಕೆ ಪಡೆಯಲು ಬಲೆಬೀಸಿದ್ದ ಪೊಲೀಸರು ಸುಳ್ಯದಲ್ಲಿ ಸೆರೆ ಹಿಡಿದಿದ್ದಾರೆ ಎನ್ನಲಾಗಿದೆ.