ಭಾರತ ವಿರುದ್ದ ಹೀನಾಯವಾಗಿ ಸೋತ ಬಳಿಕ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಹೇಳಿದ್ದೇನು?
ಭಾರತದ ವಿರುದ್ಧ ಹೀನಾಯ ಸೋಲು ಅನುಭವಿಸುವುದರೊಂದಿಗೆ ವಿಶ್ವಕಪ್ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿಗೊಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡದ ಸೆಮಿ ಫೈನಲ್ ಬಾಗಿಲು ಬಹುತೇಕ ಮುಚ್ಚಿದ್ದು ವಿಶ್ವಕಪ್ ನಿಂದ ಬಹುತೇಕ ಹೊರಬಿದ್ದಿದೆ.

ಇದೀಗ ತಂಡದ ಸೋಲಿನ ಬಗ್ಗೆ ಮಾತನಾಡಿದ ತಂಡದ ನಾಯಕ ಬಟ್ಲರ್, ‘ನಾವು ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದೇವೆ ಮತ್ತು 230 ರನ್‌ಗಳನ್ನು ಬೆನ್ನಟ್ಟುವಾಗಲೂ ನಾವು ಮತ್ತೊಮ್ಮೆ ಅದೇ ಹಳೆಯ ತಪ್ಪುಗಳನ್ನು ಮಾಡಿದೆವು.
‘ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದರು. ಆದರೆ ಬ್ಯಾಟಿಂಗ್ಗೆ ಬಂದಾಗ ನಮ್ಮಲ್ಲಿ ಉತ್ತಮ ಜೊತೆಯಾಟ ಬರಲಿಲ್ಲ. ಹೀಗಾಗಿ ನಾವು ಒತ್ತಡಕ್ಕೆ ಸಿಲುಕಿದವು. ಆದರೆ ಸ್ಕೋರ್‌ಬೋರ್ಡ್ ನೋಡಿದರೆ ನಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ, ಆದರೆ ನಾವು ಎಲ್ಲೋ ಎಡವುತ್ತಿದ್ದೇವೆ ಮತ್ತು ತಂಡದ ಅಗ್ರ ಆಟಗಾರರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ’ ಎಂದು ಜೋಸ್ ಬಟ್ಲರ್ ಹೇಳಿದ್ದಾರೆ.