ಬಂಟ್ವಾಳ: ಅಬ್ದುಲ್ ರಹೀಮ್ ಹತ್ಯೆ ಪ್ರಕರಣ, ಮತ್ತೋರ್ವ ಆರೋಪಿ ಅರೆಸ್ಟ್
ಬಂಟ್ವಾಳ: ಕೊಳತ್ತಮಜಲು ಅಬ್ದುಲ್ ರಹೀಮ್ ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಈಗಾಗಲೇ 11ಜನ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು,
ತನಿಖೆ ಮುಂದುವರಿದಂತೆ, ಜು.25ರಂದು ಬಂಟ್ವಾಳ, ಪುದು ಗ್ರಾಮದ ನಿವಾಸಿ ಸಚಿನ್ ಯಾನೆ ಸಚ್ಚು ರೊಟ್ಟಿ ಗುಡ್ಡೆ (32) ಎಂಬಾತನನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಿದೆ.