ಅಫ್ಘಾನಿಸ್ತಾನವನ್ನು ಬೆಚ್ಚಿಬೀಳಿಸಿದ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 2,000ಕ್ಕೆ ಏರಿಕೆ
ಪಶ್ಚಿಮ ಅಫ್ಘಾನಿಸ್ತಾನವನ್ನು ಬೆಚ್ಚಿಬೀಳಿಸಿದ ಪ್ರಬಲ ಭೂಕಂಪ ಸಂಭವಿಸಿದ್ದು ಸಾವಿನ ಸಂಖ್ಯೆ 2,000ಕ್ಕೆ ಏರಿದೆ.

ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಪ್ರಬಲವಾದ 6.3 ತೀವ್ರತೆಯ ಭೂಕಂಪದ ನಂತರದ ಭೂಕಂಪನದಿಂದ ಮತ್ತೆ ಹಲವು ಜನರು ಸಾವನ್ನಪ್ಪಿದ್ದರೆ ಎಂದು ವರದಿಯಾಗಿದೆ.
ಹೆರಾತ್ ನಲ್ಲಿ ಸಂಭವಿಸಿದ ಭೂಕಂಪದಿಂದ ಸಾವನ್ನಪ್ಪಿದವರ ಸಂಖ್ಯೆಯು ಹೆಚ್ಚುತ್ತಿದ್ದು ಸುಮಾರು ಆರು ಗ್ರಾಮಗಳು ನಾಶವಾಗಿವೆ ಮತ್ತು ನೂರಾರು ನಾಗರಿಕರು ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ವರದಿಯಾಗಿದೆ.