ಮಂಚಿ ವಲಯ ಮಟ್ಟದ ಕ್ರೀಡಾಕೂಟ: ಝೆನಿತ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆ
2023-24ನೇ ಶೈಕ್ಷಣಿಕ ವರ್ಷದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟವು ಸರಕಾರಿ ಪ್ರೌಢ ಶಾಲೆ ಮಂಚಿ ಇಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ 17ರ ವಯೋಮಿತಿ ಯ ಬಾಲಕರ ಚಕ್ರ ಎಸೆತ ವಿಭಾಗದಲ್ಲಿ ಹಸೀಬ್ ಇವರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
14 ರ ವಯೋಮಾನದ ಬಾಲಕಿಯರ ಲಾಂಗ್ ಜಂಪ್ ವಿಭಾಗದಲ್ಲಿ ಅವ್ವ ಜಂಶಿಯ ಇವರು ಪ್ರಥಮ ಸ್ಥಾನ ಪಡೆದು ತಾಲೂಕು ಮಟಕ್ಕೆ ಆಯ್ಕೆಯಾಗಿರುತ್ತಾರೆ ಝೆನಿತ್ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಸಫೋರ K E. ಹಾಗೂ ಶಾಲೆಯ ಆಡಳಿತ ಸಮಿತಿಯು ಮಕ್ಕಳನ್ನು ಅಭಿನಂದಿಸಿದರು. ಮೊಹಮ್ಮದ್ ಶಫ್ವಾನ್ ತರಬೇತುದಾರರಾಗಿದ್ದಾರೆ.