ಮಾನವೀಯತೆಯ ಯಶಸ್ಸು ಯುದ್ಧ ಭೂಮಿಯಲ್ಲಿಲ್ಲ: ನ್ಯೂಯಾರ್ಕ್’ನಲ್ಲಿ ಪ್ರಧಾನಿ ಮೋದಿ
ನ್ಯೂಯಾರ್ಕ್: ಮಾನವೀಯತೆಯ ಯಶಸ್ಸು ನಮ್ಮ ಸಾಮೂಹಿಕ ಶಕ್ತಿಯಲ್ಲಿದೆಯೇ ಹೊರತು ಯುದ್ಧಭೂಮಿಯಲ್ಲಿ ಇಲ್ಲ. ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಗಾಗಿ ಜಾಗತಿಕ ಸಂಸ್ಥೆಗಳಲ್ಲಿನ ಸುಧಾರಣೆಗಳು ಅವಶ್ಯಕ ಪ್ರಧಾನಿ ಮೋದಿ ಹೇಳಿದ್ದಾರೆ.
ಸೆ.23ರಂದು ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಮೂರು ದಿನಗಳ ಭೇಟಿಗಾಗಿ ಅಮೇರಿಕಾದಲ್ಲಿರುವ ಪ್ರಧಾನಿ ಮೋದಿ ಅವರು ತಮ್ಮ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ತಮ್ಮ ಇತ್ತೀಚಿನ ಉಕ್ರೇನ್ ಭೇಟಿಯ ಕುರಿತು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಚರ್ಚಿಸಿದ್ದಾರೆ. ಪ್ರಧಾನಿ ಮೋದಿಯವರ ಉಕ್ರೇನ್ ಭೇಟಿ ಮತ್ತು ಅವರ ಶಾಂತಿಯ ಸಂದೇಶವನ್ನು ಬೈಡೆನ್ ಅವರು ಶ್ಲಾಘಿಸಿದ್ದಾರೆ ಎನ್ನಲಾಗಿದೆ.
ವಿಶ್ವ ಶಾಂತಿ ಮತ್ತು ಅಭಿವೃದ್ಧಿಗಾಗಿ, ಜಾಗತಿಕ ಸಂಸ್ಥೆಗಳಿಗೆ ಸುಧಾರಣೆ ಅತ್ಯಗತ್ಯ. ನಾವು ಭಾರತದಲ್ಲಿ 250 ಮಿಲಿಯನ್ ಜನರನ್ನು ಬಡತನದಿಂದ ಮೇಲಕ್ಕೆತ್ತಿದ್ದೇವೆ ಮತ್ತು ಸುಸ್ಥಿರ ಅಭಿವೃದ್ಧಿ ಯಶಸ್ವಿಯಾಗಬಹುದೆಂದು ನಾವು ತೋರಿಸಿದ್ದೇವೆ. ಇದನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಲು ನಾವು ಸಿದ್ಧರಿದ್ದೇವೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.