ವಿಶ್ವಕಪ್ ಕ್ರಿಕೆಟ್: ನೆದರ್ಲೆಂಡ್ ವಿರುದ್ದ ದಾಖಲೆಯ… ಮೊತ್ತ ದಾಖಲಿಸಿದ ಆಸ್ಟ್ರೇಲಿಯಾ
ವಿಶ್ವಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ಇಂದು ನಡೆದ ಪಂದ್ಯದಲ್ಲಿ ನೆದರ್ಲೆಂಡ್ ವಿರುದ್ದ ಬಲಿಷ್ಠ ಆಸ್ಟ್ರೇಲಿಯಾ ಭರ್ಜರಿ ಮೊತ್ತ ಕಲೆ ಹಾಕಿದೆ.

ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ 104 ರನ್ ಗಳಿಸಿದರೆ ಗ್ಲೇನ್ ಮ್ಯಾಕ್ಸ್ ವೆಲ್ ಕೇವಲ 44 ಎಸೆತಗಳಲ್ಲಿ ಅಮೋಘ 106 ರನ್ ಸಿಡಿಸಿ ಮಿಂಚಿದರು. 50 ಓವರ್ ಕೊನೆಗೊಂಡಾಗ ಆಸ್ಟ್ರೇಲಿಯಾ ತಂಡ 8 ವಿಕೆಟ್ ಕಳೆದುಕೊಂಡ ಭರ್ಜರಿ 399 ರನ್ ಕಲೆ ಹಾಕಿತು.