ಕರಾವಳಿ

ಮಾಜಿ ಜಿ.ಪಂ ಸದಸ್ಯರೋರ್ವರ ಪುತ್ರಿಯ ಮೂತ್ರಕೋಶದ ನಾಳದಲ್ಲಿ ತೊಂದರೆ: ಸಹಾಯಕ್ಕಾಗಿ ಅಂಗಲಾಚುತ್ತಿರುವ ಕುಟುಂಬ

ಪುತ್ತೂರು: ಕೆಯ್ಯೂರು ಕೆಪಿಎಸ್‌ನ ಆಂಗ್ಲ ಮಾಧ್ಯಮ ವಿಭಾಗದ ೨ ತರಗತಿಯಲ್ಲಿ ಕಲಿಯುತ್ತಿರುವ ಪುಟ್ಟ ಬಾಲಕಿಯೋರ್ವಳಿಗೆ ಮೂತ್ರಕೋಶದ ನಾಳದಲ್ಲಿ ತೊಂದರೆ ಕಾಣಿಸಿಕೊಂಡಿದ್ದು ತುರ್ತು ಶಸ್ತ್ರ ಚಿಕಿತ್ಸೆ ಆಗಬೇಕಾಗಿದೆ ಎಂದು ವೈದ್ಯರ ನೀಡಿದ ಸೂಚನೆಯಂತೆ ಶಸ್ತ್ರಚಿಕಿತ್ಸೆಗೆ ಸಹೃದಯಿ ದಾನಿಗಳು ಧನ ಸಹಾಯ ಮಾಡುವಂತೆ ಕೆಯ್ಯೂರು ಕೆ.ಪಿ.ಎಸ್‌ನ ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರು ಬಾಬುರವರು ಅ.11ರಂದು ಕೆಯ್ಯೂರು ಗ್ರಾಪಂ ಸಭಾಂಗಣದಲ್ಲಿ ನಡೆದ ಕೆಯ್ಯೂರು ಗ್ರಾಮ ಸಭೆಯಲ್ಲಿ ಮನವಿ ಮಾಡಿಕೊಂಡರು.  ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ದಿ.ಪಕೀರ ಎಂ.ರವರು ಪುತ್ರಿಯಾಗಿರುವ ಯುಕ್ತಾ ಪಿ.ಡಿ ಇವರು ಕೆಯ್ಯೂರು ಕೆಪಿಎಸ್‌ನಲ್ಲಿ 2 ತರಗತಿಯಲ್ಲಿ ಕಲಿಯುತ್ತಿದ್ದಾರೆ. ಇವಳಿಗೆ ಮೂತ್ರಕೋಶದ ನಾಳದಲ್ಲಿ ತೊಂದರೆಯಾಗಿದ್ದು ಮಂಗಳೂರಿನ ಮಂಗಳಾ ಕಿಡ್ನಿ ಫೌಂಡೇಶನ್‌ನಲ್ಲಿ ತೋರಿಸಿ, ಸಿಟಿ ಸ್ಕ್ಯಾನ್ ಮಾಡಿದಾಗ ಮೂತ್ರಕೋಶದ ನಾಳದ ಮಧ್ಯದಲ್ಲಿ ಚಿಕ್ಕದಾಗಿದ್ದು ತಕ್ಷಣ ಸರ್ಜರಿ ಮಾಡಿಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಮಗುವಿನ ತಾಯಿಗೆ ಯಾವುದೇ ಉದ್ಯೋಗ ಇಲ್ಲದೇ ಇರುವುದರಿಂದ ಶಸ್ತ್ರಚಿಕಿತ್ಸೆಗೆ ಸುಮಾರೂ.1 ಲಕ್ಷದ 30 ಸಾವಿರ ರೂ. ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದು ಆದ್ದರಿಂದ ದಾನಿಗಳು ಧನ ಮಾಡುವಂತೆ ಶಾಲಾ ಪರವಾಗಿ ಅವರು ಕೇಳಿಕೊಂಡರು. ಈ ಬಗ್ಗೆ ವಾಟ್ಸಫ್‌ನಲ್ಲಿ ಶಾಲಾ ಪರವಾಗಿ ಮನವಿ ಪತ್ರವನ್ನು ಕೂಡ ಹರಿಯಬಿಟ್ಟಿದ್ದಾರೆ. ಸಭೆಯಲ್ಲಿದ್ದ ಮಗುವಿನ ತಾಯಿ ಧರಣಿಯವರು ಮಾತನಾಡಿ, ಈಗಾಗಲೇ ಮಂಗಳೂರಿನ ವಿವಿಧ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿದ್ದೇನೆ. ನನ್ನ ಮಗುವಿನ ಮೂತ್ರಕೋಶದ ನಾಳದ ಮಧ್ಯದಲ್ಲಿ ಚಿಕ್ಕದಾಗಿದ್ದು ಕೂಡಲೇ ಸರ್ಜರಿ ಮಾಡಬೇಕೆಂದು ಮಂಗಳಾ ಕಿಡ್ನಿ ಫೌಂಡೇಶನ್‌ನ ವೈದ್ಯರು ತಿಳಿಸಿದ್ದಾರೆ. ಹಣದ ಸಮಸ್ಯೆಯಿಂದಾಗಿ ಶಸ್ತ್ರ ಚಿಕಿತ್ಸೆಗೆ ದಾಖಲಾಗಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 1 ತಿಂಗಳ ಗೌರವಧನ ಪಾವತಿಸಿ ಪಂಚಾಯತ್ ಸದಸ್ಯರುಗಳು ಕೆಯ್ಯೂರು ಗ್ರಾಪಂನಿಂದ 10 ಸಾವಿರ ರೂ. ನೀಡುವುದಾಗಿ ಈಗಾಗಲೇ ತಿಳಿಸಲಾಗಿದೆ ಎಂದು ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಹೇಳಿದರು. ಇದೇ ವೇಳೆ ಮಾತನಾಡಿದ ಜಯಂತ ಪೂಜಾರಿ ಕೆಂಗುಡೇಲುರವರು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳ ಒಪ್ಪಿಗೆಯಂತೆ ಸದಸ್ಯರುಗಳ ಒಂದು ತಿಂಗಳ ಗೌರವಧನ ಒಟ್ಟು 15 ಸಾವಿರ ರೂ.ಅನ್ನು ಮಗುವಿನ ಶಸ್ತ್ರಚಿಕಿತ್ಸೆಗೆ ನೀಡುವುದಾಗಿ ತಿಳಿಸಿದರು. ಸಹಾಯಕ್ಕೆ ಮನವಿ ಧನ ಸಹಾಯ ಮಾಡುವ ದಾನಿಗಳು ಬ್ಯಾಂಕ್ ಆಫ್ ಬರೋಡ ಕುಂಬ್ರ ಶಾಖೆಗೆ ಧನ ಸಹಾಯ ಮಾಡಬಹುದು. ಧರಣಿ ಸಿ.ಬಿ, ಖಾತೆ ಸಂಖ್ಯೆ -70720100002621, ಐಎಫ್‌ಎಸ್‌ಸಿ ಕೋಡ್ -BARB0VJKUMB  ಮೊ.ನಂ. 7760372689

Read More
ರಾಜ್ಯ

ಮೀಸಲಾತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ, ಆರೆಸ್ಸೆಸ್ ಹಿಡನ್ ಅಜೆಂಡಾ: ಖಾದರ್

ಬೆಂಗಳೂರು: ‘ಮೀಸಲಾತಿ ಪದ್ದತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ ಹಾಗೂ ಆರೆಸ್ಸೆಸ್ ನ ಹಿಡನ್ ಅಜೆಂಡಾ’ ಎಂದು ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.  ಈ

Read More
ಕ್ರೈಂ

ಪತ್ನಿ ಜೊತೆ ಸಲುಗೆ: ಚಾಕುವಿನಿಂದ ಇರಿದು ಕೊಲೆ

ಬೆಂಗಳೂರು: ಅಮೃತಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅಸೋಲೋಮನ್ ಎಕೆನೆ (35) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದ್ದು, ಈ ಸಂಬಂಧ ಓಬಿವರಾ (26) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ‘ಅಸೋಲೋಮನ್

Read More
ರಾಷ್ಟ್ರೀಯ

ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ

ಹುಬ್ಬಳ್ಳಿ: ಹುಬ್ಬಳ್ಳಿ ನಿಜಾಮುದ್ದೀನ್ ಎಕ್ಸಪ್ರೆಸ್ ರೈಲಿನ ಹೆಸರು ಬದಲಾವಣೆ ಮಾಡಬೇಕೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮನವಿ ಮಾಡಿದ್ದಾರೆ. ನಿಜಾಮುದ್ದೀನ್ ಬದಲು ಖ್ಯಾತ ಸಂಗೀತಗಾರ ಸವಾಯಿ ಗಂಧರ್ವ ಅವರ

Read More
ರಾಜ್ಯ

ಬೆಂಗಳೂರು: ನಾಳೆಯಿಂದ (ಅ.12) ಓಲಾ, ಉಬರ್ ಆಟೊ ಸೇವೆ ಸ್ಥಗಿತ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ನಡೆಯುತ್ತಿರುವ ಆ್ಯಪ್ ಆಧಾರಿತ ಆಟೊ ಸೇವೆಯನ್ನು ನಾಳೆಯಿಂದ (ಅ.12) ಬಂದ್ ಮಾಡಲು ಖಾಸಗಿ ಕಂಪೆನಿಗಳಿಗೆ ಸಾರಿಗೆ ಇಲಾಖೆ ಸೂಚಿಸಿದೆ.

Read More
ಕ್ರೈಂರಾಷ್ಟ್ರೀಯ

ಬೆಚ್ಚಿಬಿದ್ದ ಕೇರಳ: ಸಂಪತ್ತಿನ ಆಸೆಗಾಗಿ ಇಬ್ಬರು ಮಹಿಳೆಯರ ನರಬಲಿ!

ಪತ್ತನಂತಿಟ್ಟ: ಕೆಲ ದಿನಗಳ ಹಿಂದೆ ಕಾಣೆಯಾಗಿದ್ದ ಇಬ್ಬರು ಮಹಿಳೆಯರ ಶವ ಕೊಲೆಗೈಯಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನರಬಲಿಗಾಗಿ ಕೊಲೆ ಮಾಡಲಾಗಿರಬಹುದು ಎಂದು ಶಂಕಿಸಲಾಗಿದೆ. ಕೇರಳದ ಪತ್ತನಂತಿಟ್ಟ ಜಿಲ್ಲೆಯ ತಿರುವಳ್ಳ

Read More
ಕ್ರೈಂ

ಗ್ರಾಪಂ ಸಿಬ್ಬಂದಿಯಿಂದ ಯುವತಿಯ ಮಾನಭಂಗಕ್ಕೆ ಯತ್ನ

ಪುತ್ತೂರು: ವಿಟ್ಲ ಸಮೀಪದ ಪುಣಚ ಗ್ರಾ.ಪಂ ಸಿಬ್ಬಂದಿಯೋರ್ವರು ಪಂಚಾಯತ್‌ಗೆ ಬಂದಿದ್ದ ಯುವತಿಯ ಕೈ ಹಿಡಿದು ದೌರ್ಜನ್ಯ ಎಸಗಿದ ಬಗ್ಗೆ ವಿಟ್ಲ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುಣಚ ಪಂಚಾಯತ್ ಸಿಬ್ಬಂದಿ ಉಸ್ಮಾನ್ ಆರೋಪಿಯಾಗಿದ್ದು ಪಂಚಾಯತ್‌ಗೆ ಬಂದಿದ್ದ ಯುವತಿಯ ಕೈ ಹಿಡಿದು ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಯುವತಿ ನೀಡಿದ ದೂರಿನ ದೂರಿನಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ  ತಿಳಿದು ಬಂದಿದೆ.

Read More
ರಾಜಕೀಯರಾಜ್ಯ

ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ

ರಾಯಚೂರು: ಮುಂದಿನ ಅಧಿವೇಶನದಲ್ಲಿ ಕಾಂಗ್ರೆಸ್ ಹಗರಣಗಳನ್ನು ಬಯಲು ಮಾಡುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್ ಯಡಿಯೂರಪ್ಪ ಹೇಳಿದ್ದಾರೆ. ರಾಯಚೂರು

Read More
ಕರಾವಳಿ

ಸಿಝಾನ್ ಹಸನ್‌ರವರಿಗೆ ಸನ್ಮಾನ

ಪುತ್ತೂರಿನಲ್ಲಿ ಸುಮಾರು 50ರಷ್ಟು ಜನ ತುಂಬಿದ ಬಸ್ಸು ಚಾಲಕನಿಲ್ಲದಿದ್ದಾಗ ಹಿಂದಕ್ಕೆ ಚಲಿಸಿದ ಸಂದರ್ಭದಲ್ಲಿ ಸಮಯಪ್ರಜ್ಞೆ ಮೆರೆದು ಜನರ ಜೀವ ಉಳಿಸಿ ಆಪತ್ಬಾಂಧವನಾಗಿದ್ದ ಸಿಝಾನ್ ಹಸನ್ ಉಪ್ಪಿನಂಗಡಿಯವರಿಯರನ್ನು ಪುತ್ತೂರು

Read More
ಆರೋಗ್ಯ

ವಿಡಿಯೊ ಗೇಮ್ಸ್‌ಗಳಿಂದ ಮಕ್ಕಳಲ್ಲಿ ಗಂಭೀರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆ ಸಾಧ್ಯತೆ: ವರದಿ

‘ವಿಡಿಯೊ ಗೇಮ್ಸ್‌ಗಳಿಂದ ಮಕ್ಕಳಲ್ಲಿ ಗಂಭೀರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು’ ಎಂದು ಈಚೆಗೆ ನಡೆದಿರುವ ಅಧ್ಯಯನ ವರದಿಯೊಂದು ಎಚ್ಚರಿಸಿದೆ.  ‘ಹಾರ್ಟ್‌ ರೈಮ್‌’ ನಿಯತಕಾಲಿಕದಲ್ಲಿ ಈಚೆಗೆ ಈ

Read More
error: Content is protected !!