ಆರೋಗ್ಯ

ವಿಡಿಯೊ ಗೇಮ್ಸ್‌ಗಳಿಂದ ಮಕ್ಕಳಲ್ಲಿ ಗಂಭೀರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆ ಸಾಧ್ಯತೆ: ವರದಿ



‘ವಿಡಿಯೊ ಗೇಮ್ಸ್‌ಗಳಿಂದ ಮಕ್ಕಳಲ್ಲಿ ಗಂಭೀರ ಸ್ವರೂಪದ ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು’ ಎಂದು ಈಚೆಗೆ ನಡೆದಿರುವ ಅಧ್ಯಯನ ವರದಿಯೊಂದು ಎಚ್ಚರಿಸಿದೆ. 

‘ಹಾರ್ಟ್‌ ರೈಮ್‌’ ನಿಯತಕಾಲಿಕದಲ್ಲಿ ಈಚೆಗೆ ಈ ಅಧ್ಯಯನ ವರದಿಯು ಪ್ರಕಟವಾಗಿದೆ. ಮಕ್ಕಳಲ್ಲಿನ ಹೃದಯಬಡಿತ ಕ್ರಮದಲ್ಲಿ ಏರುಪೇರಾಗಬಹುದು ಹಾಗೂ ವಿಡಿಯೊ ಗೇಮ್ಸ್‌ ಆಡುವಾಗಲೇ ಪ್ರಜ್ಞೆ ಕಳೆದುಕೊಳ್ಳುವ ಸಂದರ್ಭಗಳು ತಲೆದೋರಬಹುದು ಎಂದು ವರದಿ ತಿಳಿಸಿದೆ.

‘ವಿಡಿಯೊ ಗೇಮ್ಸ್‌ಗಳು ಮಕ್ಕಳನ್ನು ಅಸಹಜ ಸ್ಥಿತಿಗೆ ಒಯ್ಯಲಿವೆ. ಆದರೆ, ಹೃದಯಸಂಬಂಧಿ ಸಮಸ್ಯೆಗಳ ಲಕ್ಷಣಗಳು ಮುಂದಾಗಿಯೇ ಗೋಚರಿಸದಿರಬಹುದು’ ಎಂದು ಅಧ್ಯಯನ ತಂಡದ ನೇತೃತ್ವವನ್ನು ವಹಿಸಿದ್ದ ಆಸ್ಟ್ರೇಲಿಯದ ದ ಹಾರ್ಟ್‌ ಸೆಂಟರ್‌ನ ಕ್ಲೇರ್‌ ಎಂ.ಲಾಲಿ ಅವರು ಅಭಿಪ್ರಾಯಪಟ್ಟಿದ್ದಾರೆ. 

Leave a Reply

Your email address will not be published. Required fields are marked *

error: Content is protected !!