ಗ್ರಾಪಂ ಸಿಬ್ಬಂದಿಯಿಂದ ಯುವತಿಯ ಮಾನಭಂಗಕ್ಕೆ ಯತ್ನ
ಪುತ್ತೂರು: ವಿಟ್ಲ ಸಮೀಪದ ಪುಣಚ ಗ್ರಾ.ಪಂ ಸಿಬ್ಬಂದಿಯೋರ್ವರು ಪಂಚಾಯತ್ಗೆ ಬಂದಿದ್ದ ಯುವತಿಯ ಕೈ ಹಿಡಿದು ದೌರ್ಜನ್ಯ ಎಸಗಿದ ಬಗ್ಗೆ ವಿಟ್ಲ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಣಚ ಪಂಚಾಯತ್ ಸಿಬ್ಬಂದಿ ಉಸ್ಮಾನ್ ಆರೋಪಿಯಾಗಿದ್ದು ಪಂಚಾಯತ್ಗೆ ಬಂದಿದ್ದ ಯುವತಿಯ ಕೈ ಹಿಡಿದು ಮಾನಭಂಗಕ್ಕೆ ಯತ್ನಿಸಿದ ಬಗ್ಗೆ ಯುವತಿ ನೀಡಿದ ದೂರಿನ ದೂರಿನಂತೆ ಪ್ರಕರಣ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ.