ರಾಜ್ಯ

ಮೀಸಲಾತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ, ಆರೆಸ್ಸೆಸ್ ಹಿಡನ್ ಅಜೆಂಡಾ: ಖಾದರ್



ಬೆಂಗಳೂರು: ‘ಮೀಸಲಾತಿ ಪದ್ದತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ ಹಾಗೂ ಆರೆಸ್ಸೆಸ್ ನ ಹಿಡನ್ ಅಜೆಂಡಾ’ ಎಂದು ವಿಧಾನ ಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ. 



ಈ ಸಂಬಂಧ ಟ್ವೀಟ್ ಮಾಡಿರುವ ಅವರು, ‘2B ಯಲ್ಲಿರುವ ಅಲ್ಪಸಂಖ್ಯಾತ ಮೀಸಲಾತಿ ರದ್ದತಿ ಬಗ್ಗೆ ಬಿಜೆಪಿ ಶಾಸಕ ನೀಡಿರುವ ಸಂವಿಧಾನ ವಿರೋಧಿ ಹೇಳಿಕೆಯು ಬಿಬಿಎಂಪಿ ಹಾಗೂ ಸ್ಥಳಿಯ ಸಂಸ್ಥೆಗಳ ಚುನಾವಣಾ ಮೀಸಲಾತಿಯನ್ನ ಗೊಂದಲಮಯಗೊಳಿಸಿ ವ್ಯವಸ್ಥಿತವಾಗಿ ರದ್ದುಪಡಿಸಿದಂತೆ, ಈ ಬಾರಿಯೂ 2A,2B ಎಂದು ಇನ್ನಷ್ಟು ಕಗ್ಗಂಟುಗೊಳಿಸಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳು, ಪರಿಶಿಷ್ಟರು ಜಾತಿ ಮತ್ತು ಪಂಗಡದವರು ಸೇರಿದಂತೆ ಎಲ್ಲಾ ವರ್ಗಗಳಿಗಿಗೆ ಮೀಸಲಾತಿ ಪದ್ದತಿಯನ್ನು ಶಾಶ್ವತವಾಗಿ ರದ್ದುಗೊಳಿಸುವುದೇ ಬಿಜೆಪಿ ಹಾಗೂ ಆರೆಸ್ಸೆಸ್ ನ ಹಿಡನ್ ಅಜೆಂಡಾ’ ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!