ಕರಾವಳಿರಾಜಕೀಯರಾಜ್ಯ

ಪುತ್ತೂರು: ಕಾಂಗ್ರೆಸ್ ನಾಯಕಿ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲ ಕಮೆಂಟ್: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಪುತ್ತೂರು: ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ವೀಣಾ ಪಿ ಭಟ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಪೊಲಿಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಫೇಸ್‌ಬುಕ್‌ನಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ವ್ಯಕ್ತಿಯ ಕುರಿತು ವೀಣಾ ಪಿ ಭಟ್ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾಸ್ಕರ ಮಣಿಯಾಣಿ ಎಂಬವರು ವೀಣಾ ಪಿ ಭಟ್‌ರವರ ಬಗ್ಗೆ ಆಕ್ಷೇಪಾರ್ಹ ಅಶ್ಲೀಲ ಮತ್ತು ಮಾನಹಾನಿಕರ ಕಮೆಂಟ್ ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಈ ಬಗ್ಗೆ ಪೊಲಿಸರಿಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಫೇಸ್‌ಬುಕ್‌ನಲ್ಲಿ ಹಾಕಿರುವ ಕಮೆಂಟ್‌ನ್ನು ಅಳಿಸಿ ಹಾಕಿಸಿದ್ದಾರೆ. ಬಳಿಕ ಆರೋಪಿ ಮತ್ತು ದೂರುದಾರ ವೀಣಾ ಪಿ ಭಟ್‌ರವರ ಸಮಕ್ಷಮ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದು ಆರೋಪಿ ಕ್ಷಮೆ ಕೇಳಿದ ಬಳಿಕ ಪ್ರಕಣವನ್ನು ಇತ್ಯರ್ಥಪಡಿಸಲಾಗಿದೆ ಎಂದು ವೀಣಾ ಪಿ ಭಟ್ ತಿಳಿಸಿದ್ದಾರೆ.

Read More
ಕರಾವಳಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಕುಂಬ್ರದ ಆಟೋ ರಿಕ್ಷಾ ಚಾಲಕ:
ಅಂಗಾಂಗ ದಾನ

ಪುತ್ತೂರು: ಒಳಮೊಗ್ರು ಗ್ರಾಮದ ನಾಣಿಲತ್ತಡ್ಕ ನಿವಾಸಿ ಕುಂಬ್ರದಲ್ಲಿ ರಿಕ್ಷಾ ಚಾಲಕರಾಗಿದ್ದ ಐತ್ತಪ್ಪ ಯಾನೆ ಅಣ್ಣು ಪೂಜಾರಿ(54.ವ)ಯವರು ಅ.29 ರಂದು ನಿಧನರಾಗಿದ್ದು ಮೃತರ ಅಂಗಾಂಗ ದಾನ ಮಾಡುವ ಮೂಲಕ

Read More
ಕರಾವಳಿ

ಪುತ್ತೂರು: ದರ್ಬೆ ಯುನೈಟೆಡ್ ಹೋಂ ಡೆಕೋರ್‌ನಲ್ಲಿ ಮೆಗಾ ಸ್ಟಾಕ್ ಕ್ರಿಯರೆನ್ಸ್ ಸೇಲ್

ಪುತ್ತೂರು: ದರ್ಬೆ ಸರ್ಕಲ್ ಬಳಿ ಕಾರ್ಯಾಚರಿಸುತ್ತಿರುವ ಯುನೈಟೆಡ್ ಹೋಂ ಡೆಕೋರ್ ಗೃಹೋಪಯೋಗಿ ವಸ್ತುಗಳ ಮಳಿಗೆಯು ೪ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿನ್ನೆಲೆಯಲ್ಲಿ ‘ಮೆಗಾ ಸ್ಟಾಕ್ ಕ್ರಿಯರೆನ್ಸ್ ಸೇಲ್’ 50% ಡಿಸ್ಕೌಂಟ್ ಆಫರ್ ಅ.15ರಂದು ಪ್ರಾರಂಭಗೊಂಡಿದ್ದು ನ.5ರ ವರೆಗೆ ಮಾತ್ರ ಈ ಆಫರ್ ಲಭ್ಯವಿದೆ.  ಗೃಹೋಪಯೋಗಿ ವಸ್ತುಗಳಾದ ಸೋಫಾ ಸೆಟ್, ಕಪಾಟು, ಡೈನಿಂಗ್ ಟೇಬಲ್, ಟೀ ಟೇಬಲ್, ವಾಲ್ ಕ್ಲಾಕ್, ಆಫೀಸ್ ಚೆಯರ್, ಆಫೀಸ್ ಟೇಬಲ್, ಡೆಕ್ಕನ್ ಚೆಯರ್, ಬೆಡ್ ಹಾಗೂ ಇನ್ನಿತರ ನವನವೀನ ಮಾದರಿಯ ಆಧುನಿಕ ಶಯಲಿಯ ಗೃಹೋಪಯೋಗಿ ಪೀಠೋಪಕರಣಗಳು ಹಾಗೂ ನಾನಾ ತರದ ಆಧುನಿಕ ಶೈಲಿಯ ಗೃಹೋಪಯೋಗಿ ವಸ್ತುಗಳು ಲಭ್ಯವಿದೆ. ಗೃಹೋಪಯೋಗಿ ಐಟಂಗಳನ್ನು ಇಎಂಐ ಮೂಲಕ ಸುಲಭ ಕಂತುಗಳಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು ಗ್ರಾಹಕರು ತಮ್ಮ ಮನದಿಚ್ಚೆಯ ಐಟಂಗಳನ್ನು ಸಲುಭವಾಗಿ ಕನಿಷ್ಠ ಮೊತ್ತ ಪಾವತಿಸಿ ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ:8971658065 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಯುನೈಟೆಡ್ ಹೋಂ ಡೆಕೋರ್‌ನ ಮಾಲಕರು ತಿಳಿಸಿದ್ದಾರೆ

Read More
ರಾಜ್ಯ

ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ 2.5 ಲಕ್ಷ ರೂ. ಹಣ: ಕೂಡಲೇ ಲೋಕಾಯುಕ್ತ ತನಿಖೆಯಾಗಲಿ- ಹಿರಿಯ ಪತ್ರಕರ್ತರ ಆಗ್ರಹ

ಬೆಂಗಳೂರು: ಕೆಲವು ಆಯ್ದ ಪತ್ರಕರ್ತರಿಗೆ ಮುಖ್ಯಮಂತ್ರಿ ಕಚೇರಿಯಿಂದ ತಲಾ 2.5 ಲಕ್ಷ ರುಪಾಯಿ ಹಣ ನೀಡಿರುವ ಪ್ರಕರಣ ಈಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಕುರಿತು ಉನ್ನತ

Read More
ಕ್ರೈಂರಾಷ್ಟ್ರೀಯ

ಮಹಿಳೆಯ ಗುಂಪುಹತ್ಯೆ: 20 ಮಹಿಳೆಯರು ಸೇರಿ 33 ಜನರ ಬಂಧನ

ಬರಹಮ್‌ಪುರ: ಒಡಿಶಾದ ಗಂಜಾಮ್‌ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯೊಬ್ಬರನ್ನು ವಾಮಾಚಾರದ ಆರೋಪ ಹೊರಿಸಿ ಗುಂಪು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 33 ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ

Read More
ಕರಾವಳಿ

ಕಾಣಿಯೂರು ಗುಂಪು ಹಲ್ಲೆ ಮಾನವೀಯತೆಯ ಕಗ್ಗೊಲೆ-ಅನೀಸ್ ಕೌಸರಿ

ಪುತ್ತೂರು:ಜಿಲ್ಲೆಯ ಕೋಮುವಾದಿ ಶಕ್ತಿಗಳ ಮನುಷ್ಯತ್ವ ವಿರೋಧೀ ನಡೆಯಿಂದ ದೇಶವೇ ತಲೆ ತಗ್ಗಿಸುವಂತೆ ಆಗಿದ್ದು ಜಿಲ್ಲೆಗೆ ಮುಖ್ಯಮಂತ್ರಿಗಳು ಬಂದು ಹೋದ ಬಳಿಕ ಅಶಾಂತಿ ಹೆಚ್ಚುತ್ತಿದೆ. ಪರಸ್ಪರ ಧರ್ಮ ನೋಡಿ ಹಲ್ಲೆಗಳು ನಡೆಯುತ್ತಿದೆ ಇದಕ್ಕೆ ಮುಖ್ಯಮಂತ್ರಿಗಳ ಕ್ರಿಯೆಗೆ ಪ್ರತಿಕ್ರಿಯೆ ಹೇಳಿಕೆಯೇ ಕಾರಣವಾಗಿದೆ ಎಂದು ಎಸ್ಕೆಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಅನೀಸ್ ಕೌಸರಿ ಹೇಳಿದರು.  ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳಿಬ್ಬರ ಮೇಲೆ ಅಮಾನುಷ ಗುಂಪು ಹಲ್ಲೆ ನಡೆಸಿದರ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಆಶ್ರಯದಲ್ಲಿ ಅ.28ರಂದು ಸಂಜೆ ಪುತ್ತೂರು  ಕಿಲ್ಲೆ ಮೈದಾನದಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಮುಸ್ಲಿಮರಿಗೊಂದು ನ್ಯಾಯ ಹಿಂದುಗಳಿಗೊಂದು ನ್ಯಾಯ ನೀಡುವ ಮೂಲಕ ಸಹೋದರರಂತೆ ಬಾಳುತ್ತಿದ್ದ ಸಮುದಾಯಗಳ ನಡುವೆ ವಿಷ ಬೀಜ ಬಿತ್ತುವ ಕೆಲಸವನ್ನು ಸರಕಾರವೇ ಮಾಡುತ್ತಿದೆ. ಕಾಣಿಯೂರಿನಲ್ಲಿ ನಡೆದ ಗುಂಪು ಹಲ್ಲೆ ಕೃತ್ಯ ಮಾನವೀಯತೆಯ ಕಗ್ಗೊಲೆಯಾಗಿದೆ. ಈ ಪ್ರತಿಭಟನೆ ಆರಂಭಿಕ ಹಂತವಾಗಿದ್ದು ನ್ಯಾಯ ಸಿಗದಿದ್ದಲ್ಲಿ ಇನ್ನೊಂದು ಹಂತದಲ್ಲಿ ಯಾವ ರೀತಿಯ ಹೋರಾಟ ಮಾಡಬೇಕೆನ್ನುವುದು ನಮಗೆ ಗೊತ್ತಿದೆ ಎಂದು ಅವರು ಹೇಳಿದರು.  ಕಾಣಿಯೂರಿನಂತಹ ಹಲ್ಲೆ ಘಟನೆ ವಿರುದ್ಧ ಹಿಂದೂ ಸಮಾಜದ ಧರ್ಮಗುರುಗಳು ಧ್ವನಿ ಎತ್ತಬೇಕಾಗಿದ್ದು ನಮ್ಮ ಸಮುದಾಯದವರು ಆ ರೀತಿಯ ಕೃತ್ಯ ಎಲ್ಲಿಯಾದರೂ ಮಾಡಿದ್ದಲ್ಲಿ ಸಾವಿರಾರು ಉಲಮಾಗಳು ಅದರ ವಿರುದ್ಧ ಮಾತನಾಡುತ್ತಿದ್ದರು ಎಂದ ಅನೀಸ್ ಕೌಸರಿಯವರು ರಾಜ್ಯದ ಪತ್ರಿಕಾ ಮಾಧ್ಯಮಗಳೂ ಪಕ್ಷಪಾತಿ ಧೋರಣೆ ಅನುಸರಿಸುತ್ತಿದೆ. ಕೋಮು ವಿಷಬೀಜ ಬಿತ್ತುವವರ ಮೇಲೆ ಪೊಲೀಸರು ಯಾಕೆ ಕೇಸು ದಾಖಲಿಸುತ್ತಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.

Read More
ಕರಾವಳಿ

‘ಸ್ವಚ್ಛ ವಾಹಿನಿ ಸಾರಥಿ’ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾರವರಿಗೆ ಕಾವು ಹೇಮಾನಾಥ ಶೆಟ್ಟಿ ನೇತೃತ್ವದಲ್ಲಿ ಸನ್ಮಾನ

ಪುತ್ತೂರು: ಪೆರುವಾಯಿ ಗ್ರಾಮ ಪಂಚಾಯತ್ ನಲ್ಲಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲಕರಿಲ್ಲದ ಸಂದರ್ಭದಲ್ಲಿ ಸ್ವತಃ ತಾನೇ ವಾಹನ ಚಲಾಯಿಸಿ ‘ಸ್ವಚ್ಛ ವಾಹಿನಿ ಸಾರಥಿ’ಯಾಗಿ ಗುರುತಿಸಿಕೊಂಡು ರಾಜ್ಯದಲ್ಲಿ ಸುದ್ದಿಯಾಗಿ

Read More
ಕರಾವಳಿ

ಜಯನಗರ: ಈದ್ ಮೀಲಾದ್ ಆಚರಣೆ ಮತ್ತು 5ನೇ ವರ್ಷದ ಅಜ್ಮೀರ್ ವಾರ್ಷಿಕ ಮೌಲಿದ್

ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ ಮತ್ತು ಮದರಸ ಕಮಿಟಿ ಆಶ್ರಯದಲ್ಲಿ ಈದ್ ಮಿಲಾದ್ ಆಚರಣೆ ಮತ್ತು ಐದನೆಯ ವರ್ಷದ ಅಜ್ಮೀರ್ ವಾರ್ಷಿಕ ಮೌಲಿದ್ ಕಾರ್ಯಕ್ರಮ ಅಕ್ಟೋಬರ್ 26ರಂದು

Read More
ಕರಾವಳಿರಾಜ್ಯ

ಪತ್ರಕರ್ತರನ್ನು ಕೊಂಡುಕೊಳ್ಳುವ ಕೆಲಸಕ್ಕೆ ಸರಕಾರ ಮುಂದಾದಂತಿದೆ: ದಿವ್ಯಪ್ರಭಾ ಗೌಡ

ಪುತ್ತೂರು: ಮುಖ್ಯಮಂತ್ರಿ ಕಚೇರಿಯಿಂದ ಆಯ್ದ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ ಸ್ವೀಟ್ ಬಾಕ್ಸ್ ನೊಂದಿಗೆ ಲಕ್ಷ ರೂ. ಉಡುಗೊರೆ ನೀಡಲಾಗಿದೆ ಎಂಬುದು ವರದಿಯಾಗಿದ್ದುಈ ಮೂಲಕ ಪತ್ರಕರ್ತರನ್ನು ಕೊಂಡುಕೊಳ್ಳುವ ಕೆಲಸಕ್ಕೆ

Read More
Uncategorizedರಾಷ್ಟ್ರೀಯ

ದಕ್ಷಿಣ ಫಿಲಿಪ್ಪೀನ್ಸ್‌ನಲ್ಲಿ ಪ್ರವಾಹ, ಭೂಕುಸಿತ: 31 ಮಂದಿ ಸಾವು

ಫಿಲಿಪ್ಪೀನ್ಸ್‌: ಧಾರಾಕಾರ ಮಳೆಯಿಂದ ಸಂಭವಿಸಿದ ಪ್ರವಾಹ ಮತ್ತು ಭೂಕುಸಿತದಿಂದಾಗಿ ದಕ್ಷಿಣ ಫಿಲಿಪ್ಪೀನ್ಸ್‌ ಪ್ರಾಂತ್ಯದಲ್ಲಿ ಕನಿಷ್ಠ 31 ಮಂದಿ ಸಾವಿಗೀಡಾಗಿದ್ದು, ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Read More
error: Content is protected !!