‘ಸ್ವಚ್ಛ ವಾಹಿನಿ ಸಾರಥಿ’ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾರವರಿಗೆ ಕಾವು ಹೇಮಾನಾಥ ಶೆಟ್ಟಿ ನೇತೃತ್ವದಲ್ಲಿ ಸನ್ಮಾನ
ಪುತ್ತೂರು: ಪೆರುವಾಯಿ ಗ್ರಾಮ ಪಂಚಾಯತ್ ನಲ್ಲಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ಚಾಲಕರಿಲ್ಲದ ಸಂದರ್ಭದಲ್ಲಿ ಸ್ವತಃ ತಾನೇ ವಾಹನ ಚಲಾಯಿಸಿ ‘ಸ್ವಚ್ಛ ವಾಹಿನಿ ಸಾರಥಿ’ಯಾಗಿ ಗುರುತಿಸಿಕೊಂಡು ರಾಜ್ಯದಲ್ಲಿ ಸುದ್ದಿಯಾಗಿ ಮುಖ್ಯ ಮಂತ್ರಿಗಳಿಂದ ಗೌರವ ಸ್ವೀಕರಿಸಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಸ ಪೆರುವಾಯಿ ಅವರನ್ನು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮಾನಾಥ ಶೆಟ್ಟಿ ನೇತೃತ್ವದಲ್ಲಿ ಪುತ್ತೂರಿನಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ನಫೀಸ ಅವರು ತಮ್ಮ ಸೇವೆ ಪರಿಗಣಿಸಿ ಇತ್ತೀಚೆಗೆ ಅನೇಕ ಸನ್ಮಾನ ಸ್ವೀಕರಿಸಿದ್ದು ವಿದೇಶದಲ್ಲೂ ಸನ್ಮಾನ ಸ್ವೀಕರಿಸಿದ್ದರು. ಇದೀಗ ಕಾಂಗ್ರೆಸ್ ಪಕ್ಷದಿಂದ ಪ್ರಥಮ ಸನ್ಮಾನ ಸ್ವೀಕರಿಸಿದ್ದಾರೆ.