ಪತ್ರಕರ್ತರನ್ನು ಕೊಂಡುಕೊಳ್ಳುವ ಕೆಲಸಕ್ಕೆ ಸರಕಾರ ಮುಂದಾದಂತಿದೆ: ದಿವ್ಯಪ್ರಭಾ ಗೌಡ
ಪುತ್ತೂರು: ಮುಖ್ಯಮಂತ್ರಿ ಕಚೇರಿಯಿಂದ ಆಯ್ದ ಪತ್ರಕರ್ತರಿಗೆ ಹಬ್ಬದ ನೆಪದಲ್ಲಿ ಸ್ವೀಟ್ ಬಾಕ್ಸ್ ನೊಂದಿಗೆ ಲಕ್ಷ ರೂ. ಉಡುಗೊರೆ ನೀಡಲಾಗಿದೆ ಎಂಬುದು ವರದಿಯಾಗಿದ್ದು
ಈ ಮೂಲಕ ಪತ್ರಕರ್ತರನ್ನು ಕೊಂಡುಕೊಳ್ಳುವ ಕೆಲಸಕ್ಕೆ ಸರಕಾರ ಮುಂದಾದಂತಿದೆ ಎಂದು ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ಹೇಳಿದ್ದಾರೆ.
ರಾಜ್ಯದ ಎಲ್ಲ ಪತ್ರಕರ್ತರಿಗೆ ನೆರವಾಗುವಂತಹ ಯೋಜನೆಗಳನ್ನು ರೂಪಿಸುವ ಬದಲು, ಈ ರೀತಿ ತೆರಿಗೆ ಹಣ ದುರುಪಯೋಗ ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿರುವ ಅವರು
ಈ ಸುದ್ದಿ ಬಹಿರಂಗ ಪಡಿಸಿದ ಪತ್ರಕರ್ತರಿಗೆ ಮತ್ತು ಹಣ ಹಿಂತಿರುಗಿಸಿ ವೃತ್ತಿ ಪಾವಿತ್ರ್ಯತೆ ಮೆರೆದ ಪತ್ರಕರ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.