ಕರಾವಳಿ

ಸಾವಿನಲ್ಲೂ ಸಾರ್ಥಕತೆ ಮೆರೆದ ಕುಂಬ್ರದ ಆಟೋ ರಿಕ್ಷಾ ಚಾಲಕ:
ಅಂಗಾಂಗ ದಾನ


ಪುತ್ತೂರು: ಒಳಮೊಗ್ರು ಗ್ರಾಮದ ನಾಣಿಲತ್ತಡ್ಕ ನಿವಾಸಿ ಕುಂಬ್ರದಲ್ಲಿ ರಿಕ್ಷಾ ಚಾಲಕರಾಗಿದ್ದ ಐತ್ತಪ್ಪ ಯಾನೆ ಅಣ್ಣು ಪೂಜಾರಿ(54.ವ)ಯವರು ಅ.29 ರಂದು ನಿಧನರಾಗಿದ್ದು ಮೃತರ ಅಂಗಾಂಗ ದಾನ ಮಾಡುವ ಮೂಲಕ ಸಾವಿನಲ್ಲಿ ಸಾರ್ಥಕತೆ ಮೆರೆದಿದ್ದಾರೆ.

ಕೆಲವು ದಿನಗಳ ಹಿಂದೆ ಕುಂಬ್ರದಲ್ಲಿ ಕುಸಿದು ಬಿದ್ದು ಆಸ್ಪತ್ರೆ ಸೇರಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕುಂಬ್ರ ಮತ್ತು ಪರ್ಪುಂಜದಲ್ಲಿ ಹಲವು ವರ್ಷಗಳ ಕಾಲ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಮಂಗಳೂರಿನ ಯೆನಪೋಯ ಆಸ್ಪತ್ರೆಯಲ್ಲಿ ಮೃತರ ಅಪೇಕ್ಷೆಯಂತೆ ಪತ್ನಿ ಕಮಲ, ಮಕ್ಕಳಾದ ಶರತ್, ಅಶ್ವಿನಿಯವರು ಮೃತರ ಅಂಗಾಂಗ ದಾನ ಮಾಡಿಸಿದ್ದಾರೆ. ರಿಕ್ಷಾ ಚಾಲಕರಾಗಿದ್ದ ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *

error: Content is protected !!