ಕರಾವಳಿಕ್ರೈಂ

ಮಂಗಳೂರು: ಮನೆ ಮೇಲೆ ತಡೆಗೋಡೆ ಕುಸಿತ -ಇಬ್ಬರು ಮಕ್ಕಳು ಸೇರಿ ಮೂವರು ಮೃತ್ಯು


ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಗುರಿ ಪ್ರದೇಶದಲ್ಲಿ ಮನೆ ಮೇಲೆ ತಡೆಗೋಡೆ ಕುಸಿದು ಬಿದ್ದು ಮನೆ ಕುಸಿದ ಪರಿಣಾಮ ಮಹಿಳೆಯೊಬ್ಬರು ಹಾಗೂ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಅನಾಮಿಕ ಚೌರಾಸಿಯ(8), ಪರಿ(3) ಶಾಂತ, (46 ) ಮೃತಪಟ್ಟವರು  ರಕ್ಷಣಾ ಕಾರ್ಯದಲ್ಲಿ ಬದುಕಿ ಉಳಿದವರು ಅಲ್ಕಾ (14) ಅನುಷಾ( 11), ಬಾಲಕೃಷ್ಣ( 48) ಎಂದು ಗುರುತಿಸಲಾಗಿದೆ.

 

ಗರೋಡಿಯ ಮಾರಿಯಲ್ ಹೌಸ್‌ನಲ್ಲಿ ಬೆಳಿಗ್ಗೆ 4.45 ರಿಂದ 5.00 ರ ನಡುವೆ ಈ ಘಟನೆ ಸಂಭವಿಸಿದ್ದು, ನಿರಂತರ ಮಳೆಯಿಂದಾಗಿ ಕಾಂಪೌಂಡ್ ಗೋಡೆ ಕುಸಿದಿದೆ. ನಾಲ್ಕು ಕುಟುಂಬಗಳು ಕಾಂಪೌಂಡ್ ಗೋಡೆಯ ಕೆಳಗೆ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದರು.

ಬಿಹಾರ ಮೂಲದ ಲಾಲ್‌ಬಾಬು ಅವರ ಕುಟುಂಬವೂ ಕಳೆದ ಎಂಟು ವರ್ಷಗಳಿಂದ ತಮ್ಮ ಪತ್ನಿ ಮತ್ತು ಅವರ ನಾಲ್ವರು ಹೆಣ್ಣುಮಕ್ಕಳಾದ ಅಲ್ಕಾ (14), ಅನುಷಾ (11), ಅನಾಮಿಕಾ ಚೌರಾಸಿಯಾ (8), ಮತ್ತು ಪರಿ (4) ಅವರೊಂದಿಗೆ ಆ ಮನೆಯಲ್ಲಿ ವಾಸಿಸುತ್ತಿದ್ದರು. ಘಟನೆಯಲ್ಲಿ ಲಾಲ್‌ಬಾಬು ಅವರ ಕುಟುಂಬದ ಅಲ್ಕಾ ಮತ್ತು ಅನುಷಾ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆದರೆ , ಅನಾಮಿಕಾ ಚೌರಾಸಿಯಾ (8) ಮತ್ತು ಪರಿ (4) ಅವರನ್ನು ಅವಶೇಷಗಳ ಅಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದವರನ್ನು ಹೊರತೆಗೆಯಲಾಗಿದೆ. ಆದರೆ ಅವರಿಬ್ಬರು ಮೃತಪಟ್ಟಿದ್ದಾರೆ .

ಎರಡನೇ ಕುಟುಂಬ ಬಾಲಕೃಷ್ಣ (48) ಅವರದ್ದಾಗಿದ್ದು, ಅವರು ಮೂಲತಃ ಬಿಹಾರದವರಾಗಿದ್ದು, ಕಳೆದ 20 ವರ್ಷಗಳಿಂದ ಕಂಕನಾಡಿ ಗ್ರಾಮದ ಕಂಕನಾಡಿ ಪೊಲೀಸ್ ಠಾಣೆಯ ಹಿಂದೆ ವಾಸಿಸುತ್ತಿದ್ದಾರೆ. ಅವರನ್ನು ರಕ್ಷಿಸಲಾಗಿದೆ. ಆದರೆ ಅವರ ಪತ್ನಿ ಶಾಂತಾ (46) ಅವಶೇಷಗಳ ಅಡಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಅವರು ಸಾವನ್ನಪ್ಪಿದರು ಎಂದು ವರಿಯಾಗಿದೆ.

ಭೂಕುಸಿತ ಉಂಟಾದ ಪರಿಣಾಮ ಮಣ್ಣು ಕುಸಿದು ಮನೆ ಮೇಲೆ ಬಿದ್ದಿದೆ. ಪರಿಣಾಮ ಮನೆಯಲ್ಲಿದ್ದ ಆರು ಜನ ಮಣ್ಣಿನಡಿ ಸಿಲುಕಿಕೊಂಡಿದ್ದರು. ಈ ಪೈಕಿ ಓರ್ವ ಪುರುಷ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಇನ್ನುಳಿದಂತೆ ಓರ್ವ ಮಹಿಳೆ ಹಾಗೂ ಇಬ್ಬರು ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ದರ್ಶನ್ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!