ಬಂಟ್ವಾಳ: ಪಡಿತರ ಚೀಟಿದಾರರಿಗೆ ವಿತರಣೆಯಾಗಬೇಕಿದ್ದ ಅಕ್ಕಿಯಲ್ಲಿ ಗೋಲ್ ಮಾಲ್.!?
ಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಣೆಯಾಗಲು ಭಾರತೀಯ ಆಹಾರ ಇಲಾಖೆ ನೀಡಿದ ಅಕ್ಕಿಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಸುಮಾರು 1 ಕೋಟಿ 32 ಲಕ್ಷದ 36 ಸಾವಿರದ 30 ರೂ ಮೌಲ್ಯದ 3892.95.450 ಕಿಂಟ್ವಾಲ್ ಅಕ್ಕಿಯ ಕೊರತೆ ಕಂಡು ಬಂದಿದ್ದು, ಇಲ್ಲಿ ಅವ್ಯವಹಾರ ನಡೆದಿದೆ ಎಎನ್ನಲಾಗಿದೆ. ಈ ಬಗ್ಗೆ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.