ಸುಳ್ಯ: ಗಾಂಜಾ ಸಮೇತ ಯುವಕನೊಬ್ಬನನ್ನು ವಶಕ್ಕೆ ಪಡೆದ ಪೊಲೀಸರು
ದಿನಾಂಕ: ಗಾಂಜಾ ಸಮೇತ ಯುವಕನೊಬ್ಬನನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಫೆ.26ರಂದು ಮದ್ಯಾಹ್ನ, ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಸಂತೋಷ್ ಬಿಪಿ ರವರು, ಖಚಿತ ಮಾಹಿತಿಯ ಮೇರೆಗೆ ಸುಳ್ಯ ತಾಲೂಕು ಸುಳ್ಯ ಕಸ್ಬಾ ಗ್ರಾಮದ ಕುರುಂಜಿಬಾಗ್ ಎಂಬಲ್ಲಿ ದಾಳಿ ಮಾಡಿ, ಅರಂತೋಡು ಗ್ರಾಮದ ತುಷಾರ್ ಬಿ ಕೆ (22ವ ) ಎಂಬಾತನನ್ನು, ಅಂದಾಜು 510 ಗ್ರಾಂ ತೂಕದ ಗಾಂಜಾದೊಂದಿಗೆ ವಶಕ್ಕೆ ಪಡೆದಿರುತ್ತಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ: 27/2025 ಕಲಂ: 8(c),20(b) (ii)(A) NDPS ACT ರಂತೆ ಪ್ರಕರಣ ದಾಖಲಾಗಿದೆ.