ಇಂದು(ಮಾ.14) ಸಂಜೆ ಪುಣಚ ಮಸೀದಿಯಲ್ಲಿ ದುವಾ ಮಜ್ಲಿಸ್, ಇಫ್ತಾರ್ ಕೂಟ
ಪುತ್ತೂರು: ಪುಣಚದ ಮುಹಿಯುದ್ದೀನ್ ಜುಮಾ ಮಸ್ಜಿದ್ ವತಿಯಿಂದ ಪವಿತ್ರ ರಂಜಾನ್ ಮಾಸದ ಪ್ರಯುಕ್ತ ದುವಾ ಮಜ್ಲಿಸ್ ಹಾಗೂ ಇಫ್ತಾರ್ ಕೂಟ ಮಾ.14ರಂದು ಸಂಜೆ ನಡೆಯಲಿದೆ.
ಮಸೀದಿಯ ಆವರಣದಲ್ಲಿ ಸಂಜೆ ಗಂಟೆ 5:30ರಿಂದ ನಡೆಯಲಿರುವ ಆಧ್ಯಾತ್ಮಿಕ ಸಂಗಮದಲ್ಲಿ ಸಯ್ಯದ್ ಹದ್ದಾದ್ ತಂಙಳ್, ಓಲೆಮುಂಡೋವು ಉಸ್ತಾದ್, ಪುಣಚ ಉಸ್ತಾದ್, ಉಕ್ಕುಡ ಉಸ್ತಾದ್, ಹಸೈನಾರ್ ಫೈಝಿ ಪರಿಯಲ್ತಡ್ಕ, ಹಾಫಿಝ್ ಫಾರೂಕ್ ಸಖಾಫಿ ಸಾಜ, ನಾಸಿರ್ ರಝ್ವಿ ಸಾರ್ಯ, ರವೂಫ್ ಹಾಶಿಮಿ ಮಂಜ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿರಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.





