Uncategorized

ವಿಟ್ಲ: ಅಂಗಡಿ ಭಸ್ಮ ಘಟನೆ; 5 ಲಕ್ಷ ರೂ ಪರಿಹಾರ ಮಂಜೂರು: ಅಶೋಕ್ ರೈ



ಪುತ್ತೂರು: ಅಕಸ್ಮಿಕವಾಗಿ ಬೆಂಕಿ ತಗುಲಿ ವಿಟ್ಲ ಮಂಗಳೂರು ರಸ್ತೆಯಲ್ಲಿದ್ದ ಶ್ರೀ ಎಲೆಕ್ಟ್ರಿಕಲ್ ಅಂಗಡಿ ಭಸ್ಮವಾಗಿದ್ದು, ಅಂಗಡಿ ಮಾಲಿಕ ಸಂತೋಷ್‌ಕುಮಾರ್‌ರವರಿಗೆ ಸರಕಾರದಿಂದ 5 ಲಕ್ಷ ಪರಿಹಾರ ಮಂಜೂರಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.



2025 ಡಿಸೆಂಬರ್ 31ರ ರಾತ್ರಿ ವೇಳೆ ಅಕಸ್ಮಿಕ ಬೆಂಕಿಯಿಂದ ಅಂಗಡಿ ಭಸ್ಮವಾಗಿದ್ದು ಮಾತ್ರವಲ್ಲದೆ ಅಂಗಡಿಯಲ್ಲಿದ್ದ ವಿದ್ಯುತ್ ಉಪಕರಣಗಳು ನಾಶವಾಗಿ ಸುಮಾರು 80 ಲಕ್ಷ ರೂ ನಷ್ಟ ಉಂಟಾಗಿತ್ತು. ಘಟನೆಯ ವಿಷಯ ತಿಳಿದು ಶಾಸಕ ಅಶೋಕ್ ರೈ ಅವರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ಅಂಗಡಿ ಮಾಲಕಗೆ ಸಾಂತ್ವನ ತಿಳಿಸಿದ್ದರು.


ಸದ್ರಿ ಘಟನೆಯ ಬಗ್ಗೆ ಶಾಸಕರು ಮುಖ್ಯಮಂತ್ರಿಗಳಿಗೆ ಪರಿಹಾರ ಕೋರಿ ಮನವಿ ಸಲ್ಲಿಸಿದ್ದರು. ಶಾಸಕರ ಮನವಿಯನ್ನು ಪರಿಗಣಿಸಿದ ಸರಕಾರ ನಷ್ಟಕ್ಕೊಳಗಾದ ಅಂಗಡಿ ಮಾಲಿಕಗೆ 5 ಲಕ್ಷರೂ ಪರಿಹಾರ ಮಂಜೂರಗೊಳಿಸಿದೆ. ಪರಿಹಾರ ಮೊತ್ತವನ್ನು ಸಂತೋಷ್‌ಕುಮಾರ್‌ರವರ ಖಾತೆಗೆ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!