ಪುತ್ತೂರು: ಅಪ್ರಾಪ್ತನಿಂದ ಸ್ಕೂಟರ್ ಚಾಲನೆ-ಡಿಕ್ಕಿ, ಮಾಲಕನಿಗೆ ದಂಡ ವಿಧಿಸಿದ ನ್ಯಾಯಾಲಯ
ಪುತ್ತೂರು: ಅಪ್ರಾಪ್ತ ಬಾಲಕನೋರ್ವ ಸ್ಕೂಟರ್ ಚಲಾಯಿಸಿ ಇನ್ನೊಂದು ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪ್ರಕರಣದಲ್ಲಿ,ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ವಾಹನದ ಮಾಲಕನಿಗೆ ಪುತ್ತೂರು ನ್ಯಾಯಾಲಯ ದಂಡ ವಿಧಿಸಿ ತೀರ್ಪು ನೀಡಿದೆ.

2025ರ ಆ.31ರಂದು ಪುತ್ತೂರು ಕ್ಯಾಂಪ್ಕೋ ಕಚೇರಿ ಬಳಿ ಅಪ್ರಾಪ್ತನೋರ್ವ ಚಲಾಯಿಸುತ್ತಿದ್ದ ಸ್ಕೂಟರ್ ಇನ್ನೊಂದು ಸ್ಕೂಟರ್‌ಗೆ ಡಿಕ್ಕಿಯಾಗಿದ್ದರಿಂದ ಅಪ್ರಾಪ್ತ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದರು. ಈ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ, ಅಪ್ರಾಪ್ತ ಬಾಲಕನಿಗೆ ಚಲಾಯಿಸಲು ಸ್ಕೂಟರ್ ನೀಡಿದ್ದ ಸ್ಕೂಟರ್ ಮಾಲಕರಿಗೆ ರೂ.20 ಸಾವಿರ ದಂಡ ವಿಧಿಸಿದೆ.





