ಕರಾವಳಿಕ್ರೈಂ

ಮಾದಕ ವಸ್ತು ಮಾರಾಟ: ಇಬ್ಬರ ಸೆರೆ

ಮಂಗಳೂರು: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಕೋಟೆಕಾರ್ ಗ್ರಾಮದ ಬಗಂಬಿಲ ಸಮೀಪದ ಸಾರ್ವಜನಿಕ ಸ್ಥಳದಿಂದ ಇಬ್ಬರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ಉಪ್ಪಳದ ಶೇಕ್ ಅರ್ಬಾಝ್, ರಶೀದ್ ಆಲ್ವಿನ್ ಬಂಧಿತ ಆರೋಪಿಗಳು.


ಇವರು ಮಾದಕ ವಸ್ತು ಗಾಂಜಾವನ್ನು ತಂದು ತನ್ನ ಗ್ರಾಹಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳಿಂದ 51,500 ರೂ. ಮೌಲ್ಯದ 1.110 ಕೆಜಿ ಗಾಂಜಾ, 520 ರೂ. ನಗದು, ಎರಡು ಮೊಬೈಲ್ ಹಾಗೂ ಇತರ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ದಾಳಿ ಸಂದರ್ಭದಲ್ಲಿ ಓರ್ವ ಆರೋಪಿ ಮಂಜೇಶ್ವರದ ಅಲ್ತಾಫ್ ಎಂಬಾತ ಸ್ಕೂಟರ್ ನಲ್ಲಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!