ಕರಾವಳಿ

ಸಂಟ್ಯಾರ್ ಗೋಲ್ಡನ್ ಗೇಟ್‌ನಲ್ಲಿ ‘ಅಶ್ರಫ್’ ನಾಮಾಂಕಿತರ ಕರ್ನಾಟಕ ಒಕ್ಕೂಟದ ಸಭೆ


ಪುತ್ತೂರು: ‘ಅಶ್ರಫ್’ ಹೆಸರಿನ ವ್ಯಕ್ತಿಗಳ ಕರ್ನಾಟಕ ಒಕ್ಕೂಟದ ಸಭೆ ಡಿ.14ರಂದು ಅಶ್ರಫ್ ಕಲ್ಲೇಗ ಅವರ ನೇತೃತದಲ್ಲಿ ಸಂಟ್ಯಾರ್ ಗೋಲ್ಡನ್ ಗೇಟ್‌ನಲ್ಲಿ ನಡೆಯಿತು.

ದುವಾ ನೆರವೇರಿಸಿ ಉದ್ಘಾಟಿಸಿದ ಅಶ್ರಫ್ ಬಾಖವಿ ಚಾಪಳ್ಳ ಮಾತನಾಡಿ ಅಶ್ರಫ್ ಎಂಬ ಹೆಸರಿನ ಮಹತ್ವ ಮತ್ತು ಹೆರಿನ ಅರ್ಥದ ಬಗ್ಗೆ ವಿವರಿಸಿದರು. ಸತ್ಕರ್ಮಗಳಿಗೆ ಇಸ್ಲಾಂ ಪ್ರಾಧಾನ್ಯತೆ ನೀಡುವಂತೆ ಸಮಾಜಸೇವೆಗೂ ಇಸ್ಲಾಂ ಮಹತ್ವವನ್ನು ನೀಡುತ್ತದೆ, ಆದ್ದರಿಂದ ಈ ಸಂಘಟನೆಯು ಸಮಾಜ ಸೇವೆಗೆ ಹೆಚ್ಚಿನ ಒತ್ತು ನೀಡುವಂತಾಗಲಿ ಎಂದು ಆಶಿಸಿದರು.


ಅತಿಥಿಯಾಗಿದ್ದ ಮಂಗಳೂರು ಮಾಜಿ ಮೇಯರ್ ಕೆ.ಅಶ್ರಫ್ ಮಾತನಾಡಿ ‘ಅಶ್ರಫ್’ ನಾಮಾಂಕಿತ ಜಿಲ್ಲಾವಾರು ವ್ಯಕ್ತಿಗಳನ್ನು ಹುಡುಕಿ ಒಕ್ಕೂಟದಲ್ಲಿ ಸೇರ್ಪಡೆಗೊಳಿಸಿ ಜಿಲ್ಲಾ ಮಟ್ಟದ ಕಾರ್ಯಕ್ರಮ ರೂಪಿಸಿ ಸಮಾಜಕ್ಕೆ ಪೂರಕವಾದ ಕಾರ್ಯ ಯೋಜನೆ ರೂಪಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಕೇರಳ ರಾಜ್ಯ ಅಶ್ರಫ್ ಒಕ್ಕೂಟದ ಮುಖ್ಯಸ್ಥರಾದ ಅಶ್ರಫ್ ಕುಂಞಪ್ಪ, ಅಶ್ರಫ್ ಸೆಂಚುರಿ ಮಂಜೇರಿ ಮಂಡಲ ಮತ್ತು ಎಂ.ಕೆ.ಎಂ ಅಶ್ರಫ್ ಕರ್ನೂರು, ಕರ್ನಾಟಕದ ಅಶ್ರಫ್ ಆಲಿ ಸೋಮಾವಾರ ಪೇಟೆ, ಅಶ್ರಫ್ ಬಿಳಿಗೆರೆ ಕೊಡಗು, ಅಶ್ರಫ್ ಸಿ.ಎ ಬಾವ, ಅಶ್ರಫ್ ಸಿಟಿ, ಅಶ್ರಫ್ ಕೊಲ್ಲಮುಡಿ, ಅಶ್ರಫ್ ವಿ.ಎಚ್ ವಿಟ್ಲ, ಅಶ್ರಫ್ ಶೇಡಿಗುಂಡಿ, ಅಶ್ರಫ್ ಗುಂಡಿ ಸುಳ್ಯ, ಅಶ್ರಫ್ ಮಂಚಿ, ಅಶ್ರಫ್ ಕೌನ್ಸಿಲರ್ ವಿಟ್ಲ, ಅಶ್ರಫ್ ಸಿ.ಎಂ ಉಳ್ಳಾಲ, ಅಶ್ರಫ್ ಮಾಸ್ಟರ್, ಅಶ್ರಫ್ ಎಟಿಎಂ, ಅಶ್ರಫ್ ಕಲಂಬಿ, ಮೊಹಮ್ಮದ್ ಹನೀಫ್ ಯು ಮತ್ತಿತರರು ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ನ್ಯಾಯವಾದಿ ಅಶ್ರಫ್ ಆಗ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಅಶ್ರಫ್ ಕರ್ನಾಟಕ ಒಕ್ಕೂಟ ಎಂಬುವುದು ಕರ್ನಾಟಕ ರಾಜ್ಯದ ಅಶ್ರಫ್ ನಾಮಾಂಕಿತ ವ್ಯಕ್ತಿಗಳ ಒಟ್ಟು ಸೇರುವಿಕೆ ಮತ್ತು ಸೇವಾ ಉದ್ದೇಶ ಹೊಂದಿದ್ದು, ನೆರೆ ರಾಜ್ಯ ಕೇರಳದಲ್ಲಿ ‘ಅಶ್ರಫ್ ಕೂಟಾಯಿಮಾ’ ಎಂಬ ಹೆಸರಲ್ಲಿ ಹಿಂದಿನ ವರ್ಷಗಳಲ್ಲಿ ಸಮಾವೇಶ ನಡೆಸಿ ಯಶಸ್ವಿ ಪ್ರಯೋಗ ನಡೆಸಿತ್ತು.

Leave a Reply

Your email address will not be published. Required fields are marked *

error: Content is protected !!