ನಿಂತಿಕಲ್ಲು: ಕೆಪಿಸಿಸಿ ಸಂಯೋಜಕ ಹೆಚ್ ಎಂ ನಂದಕುಮಾರ್ ಅಭಿಮಾನಿಗಳಿಂದ ನಿರ್ಮಾಣಗೊಂಡ ಆಟೋ ರಿಕ್ಷಾ ನಿಲ್ದಾಣ ಉದ್ಘಾಟನೆ
ಸುಳ್ಯ: ತಾಲೂಕಿನ ನಿಂತಿಕಲ್ಲುವಿನಲ್ಲಿ ಕೆಪಿಸಿಸಿ ಸಂಯೋಜಕ ಹೆಚ್ ಎಂ ನಂದಕುಮಾರ್ ಅಭಿಮಾನಿಗಳು ನಿರ್ಮಿಸಿದ ಸುಸಜ್ಜಿತ ಆಟೋ ರಿಕ್ಷಾ ನಿಲ್ದಾಣ ನ.1ರಂದು ಉದ್ಘಾಟನೆಗೊಂಡಿತು.

ಕೆಪಿಸಿಸಿ ಸಂಯೋಜಕ ನಂದಕುಮಾರ್ ಎಚ್ ಎಂ.ರವರ ಸಹಕಾರದಿಂದ ನಿರ್ಮಾಣಗೊಂಡ ಈ ಆಟೋ ನಿಲ್ದಾಣವನ್ನು ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಿದರು. ನಾಮಫಲಕ ಅನಾವರಣವನ್ನು ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ನೆರವೇರಿಸಿದರು. ಅತಿಥಿಗಳಾಗಿ ಭಾಗವಹಿಸಿದ್ದ ಕೆಪಿಸಿಸಿ ಸದಸ್ಯ ಭರತ್ ಮುಂಡೋಡಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿಸಿ ಜಯರಾಮ್ ವಹಿಸಿದ್ದರು.
ಈ ಸಂದರ್ಭದಲ್ಲಿ ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಸದಸ್ಯರು ಕೊಡುಗೈ ದಾನಿ ಹೆಚ್ ಎಂ ನಂದಕುಮಾರ್ ರವರನ್ನು ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಿದರು.
ಎನ್ ಟಿ ವಸಂತ ಸ್ವಾಗತಿಸಿದರು. ರಮೇಶ್ ಕೋಟೆ ವಂದಿಸಿದರು.
