ಕರಾವಳಿಕ್ರೈಂ

ಮಂಗಳೂರು: ಲಿಫ್ಟ್‌ನಲ್ಲಿ ಅವಘಡ – ಯುವಕ ಮೃತ್ಯು


ಮಂಗಳೂರು: ಲಿಫ್ಟ್ ಅವಘಡದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ಕುಂಟಿಕಾನದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಬೆಳಾಲು ಗ್ರಾಮದ ಪೂಂಜಕೆರೆ ನಿವಾಸಿ ನೌಫಾಲ್ (28) ಮೃತಪಟ್ಟ ಯುವಕ.


ಶನಿವಾರ ಸಂಜೆ ನೌಫಾಲ್ ಕೆಲಸದಲ್ಲಿ ನಿರತರಾಗಿದ್ದ ವೇಳೆ ಲಿಫ್ಟ್‌ನಲ್ಲಿ ಅವಘಡ ಸಂಭವಿಸಿದೆ. ತಕ್ಷಣ ಇತರರು ಈತನನ್ನು ಅಪಾಯದಿಂದ ಪಾರು ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಮೃತ ನೌಫಾಲ್ ಅವಿವಾಹಿತ ಎಂದು ತಿಳಿದು ಬಂದಿದೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *

error: Content is protected !!