ಕರಾವಳಿ

ಜಾಲ್ಸೂರು ಹಯಾತುಲ್ ಇಸ್ಲಾಂ ಮದ್ರಸ: ಎಸ್.ಬಿ.ಎಸ್ ಪುನರ್ರಚನೆ



ಸುಳ್ಯ: ಹಯಾತುಲ್ ಇಸ್ಲಾಂ ಮದ್‌ರಸ ಜಾಲ್ಸೂರ್ ಟೌನ್ ಇದರ ವಿದ್ಯಾರ್ಥಿ ಸಂಘಟನೆ ಸುನ್ನಿ ಬಾಲ ಸಂಘ (ಎಸ್ ಬಿ ಎಸ್) ವಾರ್ಷಿಕ ಮಹಾಸಭೆಯು ಮದ್‌ರಸ ಸದರ್ ಉಸ್ತಾದರಾದ ಖಲೀಲ್ ಝುಹ್‌ರಿ ನೆಕ್ಕಿಲ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಮದ್‌ರಸ ಮುಅಲ್ಲಿಂ ಉಸ್ತಾದರಾದ ಸಲೀಂ ಸಖಾಫಿ ಅರಿಕ್ಕಿಲ ಸಭೆಯನ್ನು ಉದ್ಘಾಟಿಸಿದರು. ಮುಹಮ್ಮದ್ ಮಿಸ್‌ಅಬ್ ಕಿರಾಅತ್‌ ಪಠಿಸಿ, ಕಾರ್ಯದರ್ಶಿ ಇಬಾನ್ ಮುರ್ತಝ ಸ್ವಾಗತಗೈದರು. ಮುಹಮ್ಮದ್ ಸಲೀತ್ 2025-26 ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡಿಸಿ ಸಭೆಯ ಅಂಗೀಕಾರ ಪಡೆದರು. ನಂತರ 2026-27 ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು.

 


ಅಧ್ಯಕ್ಷರಾಗಿ ಇಬಾನ್ ಮುರ್ತಝ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಲೀತ್, ಕೋಶಾಧಿಕಾರಿ ಮುಹಮ್ಮದ್ ಆಶಿಫ್, ಉಪಾಧ್ಯಕ್ಷರುಗಳಾಗಿ ಲುತ್‌ಫಿ ರಫೀಕ್, ಮುಹಮ್ಮದ್ ಮುಸ್ತಫಾ, ಜತೆ ಕಾರ್ಯದರ್ಶಿಗಳಾಗಿ ಅಮ್ಮಾರ್ ಮುಹಮ್ಮದ್, ಮುಹಮ್ಮದ್ ಸಹೂದ್, ಸದಸ್ಯರುಗಳಾಗಿ ಮುಬಯ್ಯಿಶ್, ಮುಹಮ್ಮದ್ ಶಹೀಂ, ಮುಹಮ್ಮದ್ ಅದ್‌ನಾನ್‌ ಜವಾದ್, ಅರಫಾತ್, ಮುಹಮ್ಮದ್ ಅಸ್‌ಅದ್, ಅಬ್ದುಲ್ ವಾಹಿದ್, ಮುಹಮ್ಮದ್ ಖಾಲಿದ್ ಹಾಗೂ ಗೌರವಾಧ್ಯಕ್ಷರಾಗಿ ಖಲೀಲ್ ಝುಹ್‌ರಿ ನೆಕ್ಕಿಲ ಮತ್ತು ಮುದಬ್ಬಿರ್ ಆಗಿ ಸಲೀಂ ಸಖಾಫಿ ಅರಿಕ್ಕಿಲ ರವರನ್ನು ಆರಿಸಲಾಯಿತು.
ಇದೇ ಸಂದರ್ಭ ಮದ್‌ರಸ ನಾಯಕತ್ವದ ಆಯ್ಕೆ ಪ್ರಕ್ರಿಯೆ ನಡೆಸಿ, ಮದ್ರಸ ನಾಯಕರಾಗಿ ಅಮ್ಮಾರ್ ಮುಹಮ್ಮದ್, ಸಹ ನಾಯಕ ಮುಹಮ್ಮದ್ ಸಹೂದ್, ಮದ್ರಸ ನಾಯಕಿಯಾಗಿ ಫಾತಿಮಾ ರುಫೈದ, ಸಹ ನಾಯಕಿ ಸನಾ  ಫಾತಿಮಾಯ, ಶಿಸ್ತು ನಾಯಕ ಮುಹಮ್ಮದ್ ಮುಸ್ತಫಾ, ನಾಯಕಿ ಫಾತಿಮಾ ಫರೀಹ, ಸ್ವಚ್ಛತಾ ನಾಯಕ ಮುಹಮ್ಮದ್ ಅದ್‌ನಾನ್, ನಾಯಕಿ ಖದೀಜಾ ಹನಾ ಮುಂತಾದವರನ್ನು ಆಯ್ಕೆ ಮಾಡಲಾಯಿತು. ಎಸ್.ಬಿ.ಎಸ್. ಸಾಹಿತ್ಯ ವೇದಿಕೆ ಮುಹಾಳರ ಇದರ ಎರಡು ತಂಡಗಳನ್ನು ರಚಿಸಿ, ಮುಹಮ್ಮದ್ ಸಹೂದ್, ಲುತ್‌ಫಿ ರಫೀಕ್, ಸನಾ ಫಾತಿಮಾ, ಫಾತಿಮಾ ಶಿಫಾ ರವರು ನಾಯಕತ್ವವನ್ನು ವಹಿಸಿಕೊಂಡರು. ಸದ್‌ರ್  ಅಧ್ಯಕ್ಷೀಯ ಭಾಷಣಗೈದು ಸಂಘಟನೆಯ ಅನಿವಾರ್ಯತೆ ಮತ್ತು ಸಂಘಟಿತ ಕಾರ್ಯಾಚರಣೆ ಬಗ್ಗೆ ಹಾಗೂ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಬೇಕಾದ ವಿಷಯಗಳ ಬಗ್ಗೆ ಅರಿವು ಮೂಡಿಸಿದರು. ಕೊನೆಯಲ್ಲಿ ನೂತನ ಕಾರ್ಯದರ್ಶಿ ಮುಹಮ್ಮದ್ ಸಲೀತ್ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!