ರಾಜಕೀಯ

ಕರಾವಳಿರಾಜಕೀಯ

ರಾಜ್ಯದಲ್ಲೂ, ಪುತ್ತೂರಿನಲ್ಲೂ ಕಾಂಗ್ರೆಸ್ ಗೆಲ್ಲಿಸಲು ಈಗಲೇ ಸಿದ್ಧರಾಗಬೇಕು- ಕಾರ್ಯಕರ್ತರಿಗೆ ಶಕುಂತಳಾ ಶೆಟ್ಟಿ ಕರೆ

ಪುತ್ತೂರು: ತಳಮಟ್ಟದಲ್ಲೇ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಮೂಲಕ ರಾಜ್ಯದಲ್ಲಿ, ಹಾಗೂ ಪುತ್ತೂರಿನಲ್ಲಿ ಪಕ್ಷ ಗೆದ್ದು ಬರುವಂತೆ ಮಾಡಬೇಕು ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಅ.೩೦ರಂದು ಕಲ್ಪಣೆ ಸಮುದಾಯ ಭವನದಲ್ಲಿ ನಡೆದ ಸರ್ವೆ ವಲಯ ಕಾಂಗ್ರೆಸ್ ಸಭೆಯಲ್ಲಿ ಅವರು ಮಾತನಾಡಿದರು. ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕರ್ತರು ತಳಮಟ್ಟದಲ್ಲೇ ಸಕ್ರಿಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಬಿಜೆಪಿಯ ದುರಾಡಳಿತವನ್ನು ಜನತೆಗೆ ತಿಳಿಸುವ ಮೂಲಕ ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲುವ ಪ್ರಯತ್ನವನ್ನು ನಾವೆಲ್ಲಾ ಮಾಡಬೇಕು. ಅದಕ್ಕಾಗಿ ಈಗಿಂದೀಗಲೇ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಶಕುಂತಳಾ ಶೆಟ್ಟಿ ಕಾರ್ಯಕರ್ತರಿಗೆ ಕಿವಿಮಾತು  ಹೇಳಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ. ಬಿ.ವಿಶ್ವನಾಥ ರೈ ಮಾತನಾಡಿ ಪುತ್ತೂರಿನಲ್ಲಿ ನಮ್ಮ ಪಕ್ಷದ ಶಾಸಕರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದರು. ವಲಯಾಧ್ಯಕ್ಷ ಎಸ್.ಡಿ ವಸಂತ ಅವರ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಮಚಂದ್ರ ಸೊರಕೆ ಪ್ರಸ್ತಾವನೆಗೈದರು. ಕೆಪಿಸಿಸಿ ವಕ್ತಾರರಾದ ಅಮಳ ರಾಮಚಂದ್ರ ಭಟ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಕೂರ್ ಹಾಜಿ, ಎಸ್.ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್, ವಲಯ ಉಸ್ತುವಾರಿ ಯಾಕೂಬ್ ಮುಲಾರ್ ಬೂತ್ ಅಧ್ಯಕ್ಷರಾದ ಯತೀಶ್ ರೈ, ಮಜೀದ್ ಬಾಳಾಯ, ವಲಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ಮರಿಯ, ಮುಂಡೂರು ಗ್ರಾ.ಪಂ ಸದಸ್ಯರಾದ ಕಮಲೇಶ್ ಎಸ್.ವಿ, ವಿಜಯ ಕರ್ಮಿನಡ್ಕ, ಕಮಲ ನೇರೋಳ್ತಡ್ಕ, ಮಾಜಿ ತಾ.ಪಂ ಸದಸ್ಯೆ ಸುಮತಿ ಹಾಗೂ ಕಾಂಗ್ರೆಸ್ ಸ್ಥಳೀಯ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ವಲಯ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಸ್ವಾಗತಿಸಿದರು. ಮಜೀದ್ ಬಾಳಾಯ ವಂದಿಸಿದರು.  

Read More
ಕರಾವಳಿರಾಜಕೀಯರಾಜ್ಯ

ಪುತ್ತೂರು: ಕಾಂಗ್ರೆಸ್ ನಾಯಕಿ ವಿರುದ್ಧ ಫೇಸ್‌ಬುಕ್‌ನಲ್ಲಿ ಅಶ್ಲೀಲ ಕಮೆಂಟ್: ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು

ಪುತ್ತೂರು: ಕೆಪಿಸಿಸಿ ಮಹಿಳಾ ಪ್ರಧಾನ ಕಾರ್ಯದರ್ಶಿ ವೀಣಾ ಪಿ ಭಟ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ವ್ಯಕ್ತಿಯನ್ನು ಪೊಲಿಸರು ವಶಕ್ಕೆ ಪಡೆದ ಘಟನೆ ನಡೆದಿದೆ. ಫೇಸ್‌ಬುಕ್‌ನಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ ವ್ಯಕ್ತಿಯ ಕುರಿತು ವೀಣಾ ಪಿ ಭಟ್ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಭಾಸ್ಕರ ಮಣಿಯಾಣಿ ಎಂಬವರು ವೀಣಾ ಪಿ ಭಟ್‌ರವರ ಬಗ್ಗೆ ಆಕ್ಷೇಪಾರ್ಹ ಅಶ್ಲೀಲ ಮತ್ತು ಮಾನಹಾನಿಕರ ಕಮೆಂಟ್ ಫೇಸ್‌ಬುಕ್‌ನಲ್ಲಿ ಹಾಕಿದ್ದರು. ಈ ಬಗ್ಗೆ ಪೊಲಿಸರಿಗೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಎಚ್ಚರಿಕೆ ನೀಡಿ ಫೇಸ್‌ಬುಕ್‌ನಲ್ಲಿ ಹಾಕಿರುವ ಕಮೆಂಟ್‌ನ್ನು ಅಳಿಸಿ ಹಾಕಿಸಿದ್ದಾರೆ. ಬಳಿಕ ಆರೋಪಿ ಮತ್ತು ದೂರುದಾರ ವೀಣಾ ಪಿ ಭಟ್‌ರವರ ಸಮಕ್ಷಮ ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದು ಆರೋಪಿ ಕ್ಷಮೆ ಕೇಳಿದ ಬಳಿಕ ಪ್ರಕಣವನ್ನು ಇತ್ಯರ್ಥಪಡಿಸಲಾಗಿದೆ ಎಂದು ವೀಣಾ ಪಿ ಭಟ್ ತಿಳಿಸಿದ್ದಾರೆ.

Read More
ಕರಾವಳಿರಾಜಕೀಯ

ಕುಂಬ್ರ: ಕಟ್ಟಡ ಕಾರ್ಮಿಕರಿಗೆ ಬಸ್ ಪಾಸ್ ವಿತರಣಾ ಕಾರ್ಯಕ್ರಮ
ಕಾರ್ಮಿಕರ ಶ್ರೇಯೋಭಿವೃದ್ದಿಗೆ 15 ಸಾವಿರ ಕೋಟಿ ಮೀಸಲು: ಮಠಂದೂರು

ಪುತ್ತೂರು: ರಾಜ್ಯ ಮತ್ತು ಕೇಂದ್ರ ಸರಕಾರ ಕಾರ್ಮಿಕರ ಪರವಾಗಿಯೇ ಇದೆ. ಕಾರ್ಮಿಕರ ಸಂಕಷ್ಠಗಳಿಗೆ ಸದಾ ಸ್ಪಂದನೆಯನ್ನು ನೀಡುತ್ತಿದ್ದು ಕೊರೊನಾ ಕಾಲದಲ್ಲೂ ಅವರಿಗೆ ನೆರವು ನೀಡಲಾಗಿದೆ, ಬಸ್ ಪಾಸ್

Read More
ರಾಜಕೀಯ

ಬ್ರಿಟನ್ ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆ

ಇಂಗ್ಲೆಂಡ್: ಬ್ರಿಟನ್ ನ ನೂತನ ಪ್ರಧಾನಿಯಾಗಿ ಭಾರತೀಯ ಮೂಲದ ರಿಷಿ ಸುನಕ್ ಆಯ್ಕೆಯಾಗಿದ್ದಾರೆ. ರಿಷಿ ಸುನಕ್ ಅವರಿಗೆ 193 ಸಂಸದರ ಬೆಂಬಲ ಲಭಿಸಿದ್ದು, ಪ್ರತಿಸ್ಪರ್ಧಿ ಬೆನ್ನಿ ಮೊರ್ಡಾಂಟ್

Read More
ಕರಾವಳಿರಾಜಕೀಯ

ವ್ಯಾಪಾರಿಗಳ ಮೇಲೆ ಕಾಣಿಯೂರಿನಲ್ಲಿ ಗುಂಪು ಹಲ್ಲೆ ಪ್ರಕರಣ: ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು- ಕಾಂಗ್ರೆಸ್ ಮುಖಂಡ ಹಾರಿಸ್ ಬೈಕಂಪಾಡಿ ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕಾಣಿಯೂರಿನಲ್ಲಿ ಮುಸ್ಲಿಂ ವ್ಯಾಪಾರಿಗಳಾದ ಮಂಗಳೂರಿನ ಅಡ್ಡೂರಿನ ರಫೀಕ್ ಮತ್ತು ರಮೀಝುದ್ದೀನ್ ಎಂಬವರ ಮೇಲೆ ಮೇಲೆ ನಡೆದ ಕೊಲೆಯತ್ನ ಪ್ರಕರಣದ

Read More
ರಾಜಕೀಯರಾಜ್ಯ

ಭಾರತ್ ಜೋಡೋ ಪಾದಯಾತ್ರೆಯಲ್ಲಿ ನಟಿ ರಮ್ಯಾ ಅವರಿಗೆ ಕೆನ್ನೆಗೆ ಬಾರಿಸಿ ಸ್ವಾಗತಿಸಿದ ಡಿ.ಕೆ ಶಿವಕುಮಾರ್

ರಾಯಚೂರು: ಭಾರತ್ ಜೋಡೋ ಪಾದಯಾತ್ರೆಯ ಕೊನೆಯ ಕ್ಷಣದಲ್ಲಿ ಮಾಜಿ ಸಂಸದೆ, ನಟಿ ರಮ್ಯಾ ಅವರು ಆಗಮಿಸಿದ್ದು, ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪ್ರೀತಿಯಿಂದ ರಮ್ಯಾ

Read More
ಕರಾವಳಿರಾಜಕೀಯ

ಕೊನೆಗೂ ಮೌನ ಮುರಿದ ಶಕುಂತಳಾ ಶೆಟ್ಟಿ

ಪುತ್ತೂರು: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿವಾದಿತ ಪುರೋಹಿತರೋರ್ವರಿಂದ ಪೂಜೆ ಮಾಡಿಸಿದ ವಿಚಾರ ಗೊಂದಲಕ್ಕೆ ಕಾರಣವಾಗಿದಲ್ಲದೇ ಕಾರ್ಯಕರ್ತರ ಭಾರೀ ಆಕ್ರೋಶಕ್ಕೂ ಕಾರಣವಾಗಿತ್ತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸ್ಪಷ್ಟನೆ ನೀಡಬೇಕೆಂದು ಆಗ್ರಹ ವ್ಯಕ್ತವಾಗಿತ್ತು. ಆದರೆ ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್ ಸಭೆಗೂ ಬರದೇ ಸ್ಪಷ್ಟನೆಯನ್ನೂ ನೀಡದೆ ಮೌನಕ್ಕೆ ಶರಣಾಗಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ ವಿಶ್ವನಾಥ್ ರೈ ಅವರು ಕ್ಷಮೆ ಕೇಳಿದ್ದರೂ ಕಾರ್ಯಕರ್ತರಲ್ಲಿ ಅಸಮಾಧಾನ ಹಾಗೆಯೇ ಮುಂದುವರಿದಿತ್ತು. ಇದೀಗ ಕೆಲವು ದಿನಗಳ ಬಳಿಕ ಶಕುಂತಳಾ ಶೆಟ್ಟಿಯವರು ವಿವಾದಿತ ಪುರೋಹತರೋರ್ವರಿಂದ ಪೂಜೆ ಮಾಡಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮೊದಲ ಬಾರಿ ಮೌನ ಮುರಿದಿದ್ದಾರೆ. ಅ.೨೧ರಂದು ಪುತ್ತೂರು ಬೈಪಾಸ್ ಅಶ್ಮಿ ಕಂಫರ್ಟ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಅಲ್ಪಸಂಖ್ಯಾತ ಸಮಾವೇಶದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶಕುಂತಳಾ ಶೆಟ್ಟಿಯವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಆಯುಧ ಪೂಜೆಯಲ್ಲಿ ಭಾಗವಹಿಸಿದ್ದು ಹೌದು, ಪ್ರಸಾದ ಸ್ವೀಕರಿಸಿದ್ದೂ ಹೌದು, ಆದರೆ ಪೂಜೆ ಮಾಡಿದವರನ್ನು ಕರೆಸಿದ್ದು ನಾನಲ್ಲ ಎಂದು ತಿಳಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧೀನದಲ್ಲಿರುವ ಪೂಜಾ ಸಮಿತಿಯವರು ಅವರನ್ನು ಕರೆಸಿದ್ದು ಪೂಜೆಗೆ ಯಾರು ಬರುತ್ತಾರೆಂದು ನನಗೆ ಗೊತ್ತೂ ಇರಲಿಲ್ಲ. ಈ ಹಿಂದೆ ಬ್ಲಾಕ್ ಕಚೇರಿಯಲ್ಲಿ ನಡೆದ ಆಯುಧ ಪೂಜೆಗೂ ಶ್ರೀ ಕೃಷ್ಣ ಉಪಾಧ್ಯಾಯರು ಬಂದಿದ್ದರು. ಇತ್ತೀಚೆಗೆ ಅವರು ಕೋಮು ಪ್ರಚೋದನಕಾರಿ ಭಾಷಣ ಮಾಡಿದ ವಿಚಾರ ಆ ಬಳಿಕವೇ ತಿಳಿಯಿತು ಎಂದು ಅವರು ತಿಳಿಸಿದರು. ನಾನು ಸಾಮಾಜಿಕ ಜಾಲತಾಣ ಉಪಯೋಗಿಸುವುದು ಕಮ್ಮಿ, ಅದರಲ್ಲಿ ಬಂದಿರುವ ಆರೋಪಗಳ ಬಗ್ಗೆ ಹೆಚ್ಚು ನನಗೆ ಗೊತ್ತಿಲ್ಲ, ನನ್ನನ್ನು ಗೊತ್ತಿರುವವರಿಗೆ ಅದೆಲ್ಲಾ ಗೊತ್ತಿದೆ ಎಂದು ಶಕುಂತಳಾ ಶೆಟ್ಟಿ ತಿಳಿಸಿದರು. “ಪುರೋಹಿತ ವಿವಾದಿತ ವ್ಯಕ್ತಿಯೆಂದು ನನಗೆ ಗೊತ್ತಿರಲಿಲ್ಲ. ಗೊತ್ತಾದ ತಕ್ಷಣ ನಾನು ಪಕ್ಷದ ಪರವಾಗಿ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದೇನೆ. ಮುಂದೆ ಯಾವುದೇ ಕಾರ್ಯಕ್ರಮ ನಡೆಸುವಾಗಲೂ ಸಭೆ ಕರೆದು ಚರ್ಚಿಸಿಯೇ ಯಾವುದೇ ತೀರ್ಮಾನವನ್ನು ಕೈಗೊಳ್ಳುತ್ತೇವೆ” ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಸಭೆಗೆ ತಿಳಿಸಿದರು.

Read More
ಕರಾವಳಿರಾಜಕೀಯ

ಶಕುಂತಳಾ ಶೆಟ್ಟಿ ಪಕ್ಷ ಬದಲಾಯಿಸಿದರೂ ಮನಸ್ಸು ಬದಲಾಯಿಸಲಿಲ್ಲ: ಇಸಾಕ್ ಸಾಲ್ಮರ

ಪುತ್ತೂರು; ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರ ಗೊಂಡ ಮಾಜಿ ಶಾಸಕಿ ಪಕ್ಷಾಂತರವಾಗಿದ್ದಾರೆಯೇ ಹೊರತು ಅವರ ಮನಸ್ಸು ಸಂಘಪರಿವಾರದಲ್ಲೇ ಇದೆ, ಕೋಮುವಾದವನ್ನು ತನ್ನ ಬಗುಲಲ್ಲೇ ಇಟ್ಟುಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ

Read More
ರಾಜಕೀಯರಾಜ್ಯ

ವಾಚ್ ಪೇ ಪಿಲ್ಲೋ ಪೇ ಮೂಲಕ ಪಡೆದ ಲಂಚವೆಷ್ಟು: ಕಾಂಗ್ರೆಸ್ ಕಾಲೆಳೆದ ಬಿಜೆಪಿ

ಬೆಂಗಳೂರು: ‘ಟಾಯ್ಲೆಟ್ ಚೊಂಬಿನಲ್ಲಿ ಲಂಚ, ಹಾಸ್ಟೆಲ್ ದಿಂಬಿನಲ್ಲಿ ಲಂಚ, ‘ವಾಚ್‌ ಪೇ’ ಮೂಲಕವೂ ನೀವು ಪಡೆದ ಲಂಚ ಎಷ್ಟು’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು

Read More
error: Content is protected !!