ಗೋರಕ್ಷಕರು ಎಂದುಕೊಳ್ಳುವ ಬಿಜೆಪಿ ಸರಕಾರ ಚರ್ಮಗಂಟು ರೋಗ ನಿರ್ವಹಿಸಲು ಸಿದ್ಧಗೊಂಡಿಲ್ಲ- ದಿವ್ಯಪ್ರಭಾ

ಪುತ್ತೂರು: ಜನರನ್ನು ಭಾವನಾತ್ಮಕವಾಗಿ ಮೋಸ ಮಾಡೋದೆ ಬಿಜೆಪಿ ಕಾಯಕ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಗೌಡ ಚಿಲ್ತಡ್ಕ ಹೇಳಿದ್ದಾರೆ.
ಪಶು ಇಲಾಖೆಯಲ್ಲಿ 70% ಹುದ್ದೆಗಳು ಖಾಲಿ ಇದೆ, ವೈದ್ಯರ ಕೊರತೆ ಇದೆ. ಲಸಿಕೆಗಳಿಲ್ಲ. ಗೋರಕ್ಷಕರು ಎಂದುಕೊಳ್ಳುವ ರಾಜ್ಯ ಬಿಜೆಪಿ ಸರಕಾರ ಚರ್ಮಗಂಟು ರೋಗ ನಿರ್ವಹಿಸಲು ಸಿದ್ಧಗೊಂಡಿಲ್ಲ.
ಇದಲ್ಲದೆ, ಗೋ ಮಾಂಸ ರಫ್ತಿನಲ್ಲೂ ಭಾರತವೇ ನಂ1 ಸ್ಥಾನದಲ್ಲಿದೆ ಎಂದು ಅವರು ಬಿಜೆಪಿ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.