ರಾಜಕೀಯರಾಷ್ಟ್ರೀಯ

ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್‌ ದಾಖಲೆಯನ್ನೂ ಆಮ್ ಆದ್ಮಿ ಮೀರಿಸಿದೆ- ಜೆ.ಪಿ ನಡ್ದಾ

ನವದೆಹಲಿ: ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷದ (ಎಎಪಿ) ಸರ್ಕಾರ ಹಗರಣಗಳಿಗೆ ಹೆಸರುವಾಸಿಯಾಗುತ್ತಿದೆ. ಭ್ರಷ್ಟಾಚಾರದ ವಿಷಯದಲ್ಲಿ ಅದು ಕಾಂಗ್ರೆಸ್‌ ದಾಖಲೆಯನ್ನೂ ಮೀರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಭಾನುವಾರ ಆರೋಪಿಸಿದರು.

ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಇಲ್ಲಿನ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ‘ಪಂಚ ಪರಮೇಶ್ವರ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, ಮಹಾನಗರ ಪಾಲಿಕೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎಎಪಿಯನ್ನು ಸೋಲಿಸಲಿದೆ ಎಂದು ಹೇಳಿದರು.

‘ಅರವಿಂದ ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರವು ಪರಿಶುದ್ಧ ಸರ್ಕಾರದ ಭರವಸೆ ನೀಡಿತ್ತು. ಆದರೆ ಅಬಕಾರಿ ಇಲಾಖೆ, ಡಿಟಿಸಿ ಬಸ್‌ಗಳ ಖರೀದಿ, ಶೌಚಾಲಯ ನಿರ್ಮಾಣ ಮತ್ತು ದೆಹಲಿ ಜಲಮಂಡಳಿಯಲ್ಲಿ ಹಗರಣಗಳನ್ನು ನಡೆಸಿದೆ. ಎಎಪಿಯ ಐವರು ಶಾಸಕರು ಜಾಮೀನಿನ ಮೇಲೆ ಹೊರಬಂದಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

Leave a Reply

Your email address will not be published. Required fields are marked *

error: Content is protected !!