Uncategorizedಕರಾವಳಿರಾಜಕೀಯ

ಹರೀಶ್ ಪೂಂಜರೇ ಸರಿಯಾಗಿ ಸುಳ್ಳು ಹೇಳಲು ನಳಿನ್‌ರಿಂದ ಟ್ರೈನಿಂಗ್ ಪಡೆದುಕೊಳ್ಳಿ



ಪುತ್ತೂರು:ಬಿಜೆಪಿ ಯವರು ತಾನು ಮಾಡುವ ದುಷ್ಟ ಕಾರ್ಯಗಳಿಂದ ಜನರಿಗೆ ಛೀಮಾರಿ ಹಾಕಿಸಿಕೊಳ್ಳಿತ್ತಿದ್ದು , ಸುಳ್ಳೇ ಬಂಡವಾಳವನ್ನು ಮಾಡಿಕೊಂಡು ಜನರನ್ನು ದಿಕ್ಕು ತಪ್ಪಿಸುವ ಕೆಲಸವನ್ನು ನಿರಂತರ ಮಾಡುತ್ತಿದ್ದು, ಬಿಜೆಪಿ ದುರಾಲೋಚನೆಗಳು ಜನರಿಗೆ ಒಂದೊಂದಾಗಿ ಅರ್ಥವಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ವಕ್ತಾರ ಅಮಲರಾಮಚಂದ್ರ ಆರೋಪಿಸಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾದ ಪ್ರಹಸನ ಹಾಗೂ ಸುರತ್ಕಲ್ ಟೋಲ್‌ಗೇಟ್ ವಿರುದ್ಧ ಪ್ರತಿಭಟನೆಗೆ ಉದ್ದೇಶಿಸಿದ್ದ ಪ್ರತಿಭಟನಾಕಾರರಿಗೆ ಪೊಲೀಸರಿಗೆ ಬಿಜೆಪಿಯ ನಾಯಕರ ಕುಮ್ಮಕ್ಕಿನ ಮೂಲಕ ನೋಟಿಸ್ ನೀಡಿ ಹೇಡಿತನ ತೋರಿಸಿದ ಪ್ರಕರಣಗಳನ್ನು ಕಾಂಗ್ರೆಸ್ ಕಠಿಣವಾಗಿ ಖಂಡಿಸುತ್ತದೆ ಹಾಗೂ ಅ.18ರಂದು ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಲಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲ ನೀಡಲಿದ್ದೇವೆ. ಹರೀಶ್ ಪೂಂಜಾ ಓರ್ವ ಶಾಸಕ ಅವರು ಸಿನಿಮಾ ಸೇರಿದ್ದರೆ ಇತ್ತಮ ನಟನಾಗಬಲ್ಲರು ಆ ಕೆಪಾಸಿಟಿ ಅವರಿಗಿದೆ. ತನ್ನ ಮೇಲೆ ತಳವಾರು ದಾಳಿಗೆ ಯತ್ನ ನಡೆದಿದೆ ಎಂಬ ಹೇಳಿಕೆಯ ಸಿನಿಮಾದ  ನಿರ್ದೇಶನ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ಅವರೇ ಬರೆದು ಕೊನೆಗೆ ನಗೆಪಾಟಲೀಗೀಡಾಗಿದ್ದಾರೆ ಇಂಥಹ ಹೇಳಿಕೆ ಶಾಸಕರಾದವರಿಗೆ ಶೋಭೆ ತರುವುದಿಲ್ಲ ಎಂದರು.

ಮಾಧ್ಯಮದೊಂದಿಗೆ ಮಾತನಾಡುವಾಗ ರಿಯಾಜ್ ನನ್ನು ಜಿಹಾದಿ ಎಂದು ಕರೆದಿದ್ದು ತನ್ನನ್ನು ಹಿಂದುತ್ವದ ಶಾಸಕನೆಂದು ಬಿಂಬಿಸಿದ್ದಾರೆ. ಈ ರೀತಿ ಪ್ರಹಸನ ಮಾಡುವ ಬದಲು ಅವರು ಕುತ್ತಿಗೆಗೆ ಒಂದು ’ತಾನೊಬ್ಬ ಹಿಂದೂ ಶಾಸಕ ಆ ಕಾರಣಕ್ಕಾಗಿ ಜಿಹಾದಿಗಳು ತನ್ನನ್ನು ಹತ್ಯೆ ಮಾಡಲು ಸಂಚು ರೂಪಿಸುತ್ತಿದ್ದಾರೆಂದು’ ಬರೆದ ಬೋರ್ಡ್ ಹಾಕಿಕೊಂಡು ತಿರುಗಾಡಲಿ ಮತ್ತು ಪ್ರಹಸನ ಮಾಡುವಾಗ ಬಿಜೆಪಿಯ ಇನ್ನೋರ್ವ ಪ್ರಮುಖ ನಟ ನಳಿನ್ ಕುಮಾರ್ ಕಟೀಲ್ ರವರೊಂದಿಗೆ ತರಬೇತಿ ಪಡೆದುಕೊಳ್ಳಲಿ ಎಂದು ವ್ಯಂಗ್ಯವಾಡಿದರು.

 ಕಳೆದ 6-7 ವರ್ಷಗಳಿಂದ ತೆರವಾಗದೇ ಇರುವ ಟೋಲ್ ಗೇಟ್ ತೆರವಾಗಿಸುವ ಕುರಿತು ಪ್ರತಿಭಟನೆಗೆ ಯೋಜಿಸಿದ್ದ ಪ್ರತಿಭಟನೆಕಾರರ ಮನೆಗೆ ಮಧ್ಯರಾತ್ರಿ ಮನೆಗೆ ಹೋಗಿ ಅವರಿಗೆ ನೋಟಿಸ್ ನೀಡಿದ ಕಾರ್ಯ ಮಂಗಳೂರಿನಲ್ಲಾಗಿದೆ.ಆ ಮೂಲಕ ಪ್ರತಿಭಟನಾಕಾರರ ಮನೆಯಲ್ಲಿ ಭಯದ ವಾತಾವರಣ ಮೂಡಿಸುವ ಕೆಲಸ ನಡೆದಿದೆ ಇದು ಬಿಜೆಪಿಯ ಸಂಸದ ಹಾಗೂ ಶಾಸಕರ ಕುಮ್ಮಕ್ಕಿನಿಂದ ನಡೆದಿದ್ದು ಬಿಜೆಪಿ ನಾಯಕರಿಗೆ ಟೋಲ್ ಗೇ ಟ್ ತೆರವು ಮಾಡಲು ಮನಸ್ಸಿಲ್ಲ ಯಾಕೆಂದರೆ ಚುನಾವಣೆಯ ಸಂದರ್ಭದಲ್ಲಿ ಇದೇ ಮಲ್ಟಿನ್ಯಾಷನಲ್ ಕಂಪನಿಗಳಿಂದ ಫಂಡಿಂಗ್ ನೀಡಲಾಗುತ್ತದೆ ಆದ್ದರಿಂದ ಪ್ರತಿಭಟನಾಕಾರರನ್ನು ಹತ್ತಿಕ್ಕುವ ಪ್ರಯತ್ನವನ್ನು ಮಾಡಿದೆ. ಈ ಎಲ್ಲಾ ಕೆಲಸದಿಂದ ಬಿಜೆಪಿಯ ಬಂಡವಾಳ ಬಯಲಾಗಿದೆ.ಈ ಬೆಳವಣಿಗೆಗಳನ್ನು ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಅಮಳ ರಾಮಚಂದ್ರ ಹೇಳಿದರು.

ಕಾಂಗ್ರೆಸ್ ಮುಖಂಡರಾದ ಮೌರಿಸ್ ಮಸ್ಕರೇನ್ಹಸ್, ಶಕೂರ್ ಹಾಜಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!