ಕರಾವಳಿ

ಕರಾವಳಿ

ಏಮ್ಸ್ ಕಾಲೇಜು ದ.ಕ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ

ಪುತ್ತೂರು:  ಏಮ್ಸ್ ಕಾಲೇಜು ಕಡಬ ಇದರ ಜಿಲ್ಲಾ ಸಮಿತಿ ರಚನಾ ಸಮಾರಂಭ ಏಮ್ಸ್ ವಿದ್ಯಾಸಂಸ್ಥೆಯ ಕೇಂದ್ರ ಸಮಿತ ಅಧ್ಯಕ್ಷ  ಬಾಂಡ್ ತಿಪ್ಪೇ ಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿರುವ ಸಂಸ್ಥೆಯ ಜಿಲ್ಲಾ ಕಛೇರಿಯಲ್ಲಿ ನ.3ರಂದು ನಡೆಯಿತು. ಮಂಗಳೂರು ವಿ.ವಿ ಮಾಜಿ ಕುಲಸಚಿವ ಪ್ರೊಫೆಸರ್ ಎ.ಎಂ ಖಾನ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಏಮ್ಸ್ ವಿದ್ಯಾಸಂಸ್ಥೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ವಿದ್ಯಾಸಂಸ್ಥೆಯಾಗಿದ್ದು ಇದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು  ಹೇಳಿದರು.  ಏಮ್ಸ್ ವಿದ್ಯಾಸಂಸ್ಥೆಯ ಸ್ಥಾಪಕ ಟ್ರಸ್ಟಿ ಹಾಗೂ ಅಧ್ಯಕ್ಷರಾದ ಮರಿಯಂ ಫೌಝಿಯ ಬಿ.ಯಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಬಗ್ಗೆ ಹಾಗೂ ಜಿಲ್ಲಾ ಸಮಿತಿಯ ಧ್ಯೇಯೋದ್ದೇಶಗಳ ಬಗ್ಗೆ ವಿವರವಾಗಿ ಮಾತನಾಡಿದರು. ನಂತರ ಏಮ್ಸ್ ವಿದ್ಯಾಸಂಸ್ಥೆಯ ಕೇಂದ್ರ ಸಮಿತಿಯ ನಿರ್ದೇಶಕರಾದ ಬಾಂಡ್ ತಿಪ್ಪೇಸ್ವಾಮಿ ಬೆಂಗಳೂರುರವರ ನೇತೃತ್ವದಲ್ಲಿ ಜಿಲ್ಲಾ ಸಮಿತಿ ರಚನೆ ನಡೆಯಿತು. ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ (ಶಾಲಿಮಾರ್ ರಿಯಲ್ಟಿ ಹೋಲ್ಡಿಂಗ್ಸ್), ಗೌರವಾದ್ಯಕ್ಷರಾಗಿ ಎಂ.ಎಚ್ ಮೊಯ್ದೀನ್ ಹಾಜಿ ಅಡ್ಡೂರು, ಗೌರವ ಸಲಹೆಗಾರರಾಗಿ ಪ್ರೊಫೆಸರ್ ಪಟ್ಟಾಭಿರಾಮ ಸೋಮಯಾಜಿ, ಉಪಾಧ್ಯಕ್ಷರಾಗಿ ಡಾ|ಇ.ಕೆ.ಎ ಸಿದ್ದೀಕ್ (ರಿಫ ಪೊಲಿ ಕ್ಲಿನಿಕ್ )ಅಡ್ಡೂರು, ಮತ್ತು ಪೌಲ್ಸ್ ಮಂಗಳೂರು( ಗ್ಲೋಬ್ ಟಿವಿ ಅಧ್ಯಕ್ಷರು), ಪ್ರಧಾನ ಕಾರ್ಯದರ್ಶಿಗಳಾಗಿ ಡಾ ಇಸ್ಮಾಯಿಲ್ ಎನ್, (ನಿವೃತ ಪ್ರಾ೦ಶುಪಾಲರು) ಜೊತೆ ಕಾರ್ಯದರ್ಶಿ ಗಳಾಗಿ ಅಬ್ದುಲ್ ಹಮೀದ್ ಕಣ್ಣೂರು, ಎಂ ಜಿ ಶಾಹುಲ್ ಹಮೀದ್ ಗುರುಪುರ, ಎ ಕೆ ರಿಯಾಝ್ ಅಡ್ಡೂರು, ಕೋಶಾಧಿಕಾರಿಯಾಗಿ ಸಾಜಿದ ಕಡಬ, ಸಂಘಟನಾ ಕಾರ್ಯದರ್ಶಿಯಾಗಿ ಬಾತಿಷ್ ಅಳಕೆಮಜಲು ಆಯ್ಕೆಯಾದರು. ಸಮಿತಿ ಸದಸ್ಯರಾಗಿ ಬಿ ಮಹಮ್ಮದ್ ಸಾಹೇಬ್(ಏಮ್ಸ್ ತಾಲೂಕು ಅಧ್ಯಕ್ಷರು ಪುತ್ತೂರು) ಏಮ್ಸ್ ಜಿಲ್ಲಾ ಸದಸ್ಯರಾಗಿ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ (ಜಿಲ್ಲಾ ಅಧ್ಯಕ್ಷರು ಜಾನಪದ ಸಾಹಿತ್ಯ ಹಾಗೂ ಸದಸ್ಯರು ತುಳುಪೀಠ ಮಂಗಳೂರು ವಿ.ವಿ) ಮೊಯಿದಿನ್ ಕುಟ್ಟಿ ಪೆರ್ನೆ ಉಪ್ಪಿನಂಗಡಿ, ದಿನೇಶ್ ಕಾಮತ್ ಪುತ್ತೂರು, ಲೋಕಯ್ಯ ಶಿಶಿಲ, ಅಲ್ತಾಫ್ ಅನ್ವರ್ ಬಿ.ಯವನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಮಾತನಾಡಿ ಏಮ್ಸ್ ವಿದ್ಯಾಸಂಸ್ಥೆಗೆ ಕಟ್ಟಡ ಕಲ್ಪಿಸುವುದೇ ಮೊದಲ ಗುರಿಯಾಗಿದೆ ಎಂದು ಹೇಳಿದರು.  ಸಂಸ್ಥೆಯ ಫೌಂಡರ್ ಟ್ರಸ್ಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಮೀರಾ ಕೆ.ಎ ಸ್ವಾಗತಿಸಿದರು. ಸ್ಥಾಪಕ ಟ್ರಸ್ಟಿ ಸಂಸ್ಥೆಯ ಅಧ್ಯಕ್ಷರಾದ ಮರಿಯ೦ ಫೌಝಿಯ ಬಿ.ಯಸ್ ಅಗಲಿದ ಇವರ ತಾಯಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಸಂಸ್ಥೆಯ ಕೋಶಾಧಿಕಾರಿ ಸಾಜಿದ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಶಕೀಲಾ ಫರ್ವಿನ್ ವಂದಿಸಿದರು.

Read More
ಕರಾವಳಿಕ್ರೈಂ

ವಿಟ್ಲ: ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಆರೋಪ – ಎರಡು ಪ್ರತ್ಯೇಕ ಪ್ರಕರಣ ದಾಖಲು – ಮೂವರ ಬಂಧನ

ವಿಟ್ಲ: ಕೊಳ್ನಾಡು ಗ್ರಾಮದ ಅಪ್ರಾಪ್ತ ಬಾಲಕಿಯನ್ನುಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿದ ಆರೋಪದ ಮೇಲೆ ವಿಟ್ಲ ಠಾಣಾ ಪೊಲಿಸರು ಪೋಕ್ಸೋ ಕಾಯ್ದೆಯಡಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಓರ್ವ

Read More
ಕರಾವಳಿ

ಕುರಿಯ: ಅನಾರೋಗ್ಯದಲ್ಲಿರುವ ಹಿರಿಯ ಕಾಂಗ್ರೆಸ್ಸಿಗನ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ: ಧನ ಸಹಾಯ

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ಕಾಂಗ್ರೆಸ್ಸಿಗ ಕುರಿಯ ನಿವಾಸಿ ಚನಿಯ ಮೊಗೇರ ಅವರ ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ ವಿಶ್ವನಾಥ

Read More
ಕರಾವಳಿರಾಜಕೀಯ

ಕುರಿಯ: ಅನಾರೋಗ್ಯದಲ್ಲಿರುವ ಹಿರಿಯ ಕಾಂಗ್ರೆಸ್ಸಿಗ ಚನಿಯ ಮೊಗೇರ ಮನೆಗೆ ಕಾಂಗ್ರೆಸ್ ನಿಯೋಗ ಭೇಟಿ- ಧನ ಸಹಾಯ

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ಕಾಂಗ್ರೆಸ್ಸಿಗ ಕುರಿಯ ನಿವಾಸಿ ಚನಿಯ ಮೊಗೇರ ಅವರ ಮನೆಗೆ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಬಿ ವಿಶ್ವನಾಥ

Read More
ಕರಾವಳಿಕ್ರೈಂ

ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ಯುವಕನ ಬಂಧನ

ವಿಟ್ಲ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯೋರ್ವನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು ಎಂಬಲ್ಲಿ ಬಂಧಿಸಿರುವುದಾಗಿ ತಿಳಿದು

Read More
ಕರಾವಳಿರಾಜಕೀಯರಾಜ್ಯ

KRS ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿ ಪುತ್ತೂರು ಕುಂಬ್ರಕ್ಕೆ ಭೇಟಿ

ಪುತ್ತೂರು: ಲಂಚಮುಕ್ತ ರಾಜ್ಯ ನಿರ್ಮಾಣದ ಅಜೆಂಡಾವನ್ನು ಹೊಂದಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ (ಕೆ.ಆರ್.ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿಕೃಷ್ಣಾ ರೆಡ್ಡಿಯವರು ನ.3 ರಂದು ಪುತ್ತೂರು, ಕುಂಬ್ರಕ್ಕೆ ಭೇಟಿ

Read More
ಕರಾವಳಿ

ಮಾಡಾವು: ಹೊಳೆಗೆ ತ್ಯಾಜ್ಯದ ಕಟ್ಟು ಎಸೆದ ವ್ಯಕ್ತಿಯನ್ನು ಪತ್ತೆ ಹಚ್ಚಿ ದಂಡ ವಿಧಿಸಿದ ಪಂಚಾಯತ್

ಪುತ್ತೂರು: ಕೆಯ್ಯೂರು ಗ್ರಾ.ಪಂ ವ್ಯಾಪ್ತಿಯ ಮಾಡಾವು ಹೊಳೆಗೆ ತ್ಯಾಜ್ಯ ಹಾಕಿದ ವ್ಯಕ್ತಿಗೆ ಗ್ರಾಪಂ ಅಧಿಕಾರಿಯವರು 5 ಸಾವಿರ ರೂ.ದಂಡ ವಿಧಿಸಿರುವ ಘಟನೆ ನಡೆದಿದೆ. ಸುಳ್ಯ ತಾಲೂಕಿನ ಮಂಡೆಕೋಲು

Read More
ಕರಾವಳಿ

ಜಲ ಮೂಲಗಳನ್ನು ರಕ್ಷಿಸಿಕೊಳ್ಳುವುದು ನಮ್ಮೆಲ್ಲರ‌ ಜವಾಬ್ದಾರಿ-ದಿವ್ಯಾಪ್ರಭಾ

ಮಂಗಳೂರು: ಯುವ ಜನತೆಗೆ ಮತ್ತು ಮಕ್ಕಳಿಗೆ ಸುಸ್ಥಿರ ಅಭಿವೃದ್ಧಿ ಮತ್ತು ನೀರಿನ ಮಹತ್ವ ತಿಳಿಸಿಕೊಟ್ಟಾಗ ಮಾತ್ರ ಮುಂದಿನ ತಲೆಮಾರಿಗೆ ಶುದ್ಧ ಜಲವನ್ನು ನೀಡಲು ಸಾಧ್ಯ ರಾಜ್ಯ ಸಮಾಜ

Read More
ಕರಾವಳಿ

ಸವಣೂರು ವಲಯ ಮಟ್ಟದ ಕ್ರೀಡಾಕೂಟ: ಅಮಿನಾ ಆಸೀಮ ತಾಲೂಕು ಮಟ್ಟಕ್ಕೆ

ಪುತ್ತೂರು: ಸವಣೂರು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸವಣೂರು ಮೊಗರು ಸ.ಹಿ.ಪ್ರಾಥಮಿಕ ಶಾಲೆಯ 7 ನೇ ತರಗತಿಯ ಅಮೀನಾ ಆಸೀಮ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ತಾಲೂಕು

Read More
ಕರಾವಳಿರಾಜ್ಯ

ನಾಡಪ್ರಭು ಕೆಂಪೇಗೌಡ ಥೀಮ್ ಪಾರ್ಕ್ ಅಭಿಯಾನ ರಥಕ್ಕೆ ಕುಂಬ್ರದಲ್ಲಿ ಸ್ವಾಗತ

ಪುತ್ತೂರು: ಬೆಂಗಳೂರಿನಲ್ಲಿ ಅನಾವರಣಗೊಳ್ಳಲಿರುವ ನಾಡಪ್ರಭು ಕೆಂಪೇಗೌಡರವರ 108 ಅಡಿ ಎತ್ತರದ ಪ್ರತಿಮೆ, ಥೀಮ್ ಪಾರ್ಕ್‌ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಪುತ್ತೂರು ತಾಲೂಕು ಪಂಚಾಯತ್ ಇದರ ಆಶ್ರಯದಲ್ಲಿ ತಾಲೂಕಿನಲ್ಲಿ

Read More
error: Content is protected !!