ಏಮ್ಸ್ ಕಾಲೇಜು ದ.ಕ ಜಿಲ್ಲಾ ಸಮಿತಿ ಅಸ್ತಿತ್ವಕ್ಕೆ
ಪುತ್ತೂರು: ಏಮ್ಸ್ ಕಾಲೇಜು ಕಡಬ ಇದರ ಜಿಲ್ಲಾ ಸಮಿತಿ ರಚನಾ ಸಮಾರಂಭ ಏಮ್ಸ್ ವಿದ್ಯಾಸಂಸ್ಥೆಯ ಕೇಂದ್ರ ಸಮಿತ ಅಧ್ಯಕ್ಷ ಬಾಂಡ್ ತಿಪ್ಪೇ ಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳೂರಿನಲ್ಲಿರುವ ಸಂಸ್ಥೆಯ ಜಿಲ್ಲಾ ಕಛೇರಿಯಲ್ಲಿ ನ.3ರಂದು ನಡೆಯಿತು. ಮಂಗಳೂರು ವಿ.ವಿ ಮಾಜಿ ಕುಲಸಚಿವ ಪ್ರೊಫೆಸರ್ ಎ.ಎಂ ಖಾನ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಏಮ್ಸ್ ವಿದ್ಯಾಸಂಸ್ಥೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ವಿದ್ಯಾಸಂಸ್ಥೆಯಾಗಿದ್ದು ಇದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು.
ಏಮ್ಸ್ ವಿದ್ಯಾಸಂಸ್ಥೆಯ ಸ್ಥಾಪಕ ಟ್ರಸ್ಟಿ ಹಾಗೂ ಅಧ್ಯಕ್ಷರಾದ ಮರಿಯಂ ಫೌಝಿಯ ಬಿ.ಯಸ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಬಗ್ಗೆ ಹಾಗೂ ಜಿಲ್ಲಾ ಸಮಿತಿಯ ಧ್ಯೇಯೋದ್ದೇಶಗಳ ಬಗ್ಗೆ ವಿವರವಾಗಿ ಮಾತನಾಡಿದರು. ನಂತರ ಏಮ್ಸ್ ವಿದ್ಯಾಸಂಸ್ಥೆಯ ಕೇಂದ್ರ ಸಮಿತಿಯ ನಿರ್ದೇಶಕರಾದ ಬಾಂಡ್ ತಿಪ್ಪೇಸ್ವಾಮಿ ಬೆಂಗಳೂರುರವರ ನೇತೃತ್ವದಲ್ಲಿ ಜಿಲ್ಲಾ ಸಮಿತಿ ರಚನೆ ನಡೆಯಿತು.
ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಮಾತನಾಡಿ ಏಮ್ಸ್ ವಿದ್ಯಾಸಂಸ್ಥೆಗೆ ಕಟ್ಟಡ ಕಲ್ಪಿಸುವುದೇ ಮೊದಲ ಗುರಿಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಫೌಂಡರ್ ಟ್ರಸ್ಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಮೀರಾ ಕೆ.ಎ ಸ್ವಾಗತಿಸಿದರು. ಸ್ಥಾಪಕ ಟ್ರಸ್ಟಿ ಸಂಸ್ಥೆಯ ಅಧ್ಯಕ್ಷರಾದ ಮರಿಯ೦ ಫೌಝಿಯ ಬಿ.ಯಸ್ ಅಗಲಿದ ಇವರ ತಾಯಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಸಂಸ್ಥೆಯ ಕೋಶಾಧಿಕಾರಿ ಸಾಜಿದ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ಶಕೀಲಾ ಫರ್ವಿನ್ ವಂದಿಸಿದರು.