ಕರಾವಳಿ

ಕರಾವಳಿ

ಪುತ್ತೂರು: ದುಬೈ ನ್ಯೂ ಬುರ್ಖಾ ಪ್ಯಾಲೇಸ್‌ನಲ್ಲಿ ಡಿಸ್ಕೌಂಟ್ ಆಫರ್-ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ

ಪುತ್ತೂರು: ಕಲ್ಲಾರೆಯಲ್ಲಿ ಕಾರ್ಯಾಚರಿಸುತ್ತಿರುವ ದುಬೈ ನ್ಯೂ ಬುರ್ಖಾ ಪ್ಯಾಲೇಸ್ ಸೀಮಿತ ಅವಧಿಯ ಆಫರ್ ಪ್ರಾರಂಭಗೊಂಡಿದ್ದು ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಳಿಗೆಯಲ್ಲಿ ವಿವಿಧ ಮಾದರಿಯ ಬುರ್ಖಾಗಳ ಮೇಲೆ ಬೃಹತ್ ರಿಯಾಯಿತಿ ದರ ಪ್ರಕಟಿಸಲಾಗಿದ್ದು ಸ್ಟೂಡೆಂಟ್ ಬುರ್ಖಾ, ವೆಡ್ಡಿಂಗ್ ಬುರ್ಖಾ, ಹ್ಯಾಂಡ್ ವರ್ಕ್ ಬುರ್ಖಾ, ನಾರ್ಮಲ್ ಬುರ್ಖಾ, ಪ್ರಿಲ್ ಬುರ್ಖಾ ಸೇರಿದಂತೆ ಆಧುನಿಕ ಶೈಲಿಯ ವಿವಿಧ ವಿನ್ಯಾಸಗಳ ಬುರ್ಖಾಗಳು ಲಭ್ಯವಿದೆ. ಆಫರ್ ಪ್ರಯುಕ್ತ ಪ್ರತೀ ಬುರ್ಖಾಗಳ ಮೇಲೆ 20% ದಿಂದ 50% ವರೆಗೆ ರಿಯಾಯಿತಿ ದರ ಪ್ರಕಟಿಸಲಾಗಿದೆ.  ನ.21ಕ್ಕೆ ಆಫರ್ ಪ್ರಾರಂಭಗೊಂಡಿದ್ದು ನ.27ಕ್ಕೆ ಆಫರ್ ಕೊನೆಗೊಳ್ಳಲಿದೆ. ಗ್ರಾಹಕರು ಸೀಮಿತ ಅವಧಿಯ ಆಫರ್‌ನ್ನು ಸದುಪಯೋಗಪಡಿಸಿಕೊಳ್ಳುವಂತೆ ದುಬೈ ಬುರ್ಖಾ ಮಳಿಗೆಯ ಮಾಲಕರು ವಿನಂತಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ: 9686897871, 9108123500 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Read More
ಕರಾವಳಿ

ನ.೨೪: ಈಶ್ವರಮಂಗಲದಲ್ಲಿ ಅಬ್ಕೋ ಗೋಲ್ಡ್ ಚಿನ್ನದ ಮಳಿಗೆ ಶುಭಾರಂಭ

ಪುತ್ತೂರು: ಈಶ್ವರಮಂಗಲ ಪೇಟೆಯಲ್ಲಿರುವ ಟಿ.ಎ ಕಾಂಪ್ಲೆಕ್ಸ್‌ನಲ್ಲಿ ಅಬ್ಕೋ ಗೋಲ್ಡ್ & ಡೈಮಂಡ್ಸ್ ಮಳಿಗೆ ನ.24ರಂದು ಬೆಳಿಗ್ಗೆ ಗಂಟೆ 10-30ಕ್ಕೆ ಶುಭಾರಂಭಗೊಳ್ಳಲಿದೆ. ಅಸ್ಸಯ್ಯದ್ ಕೆ.ಎಸ್ ಅಲೀ ತಂಙಳ್ ಕುಂಬೋಳ್ ಹಾಗೂ ಅಸ್ಸಯ್ಯದ್ ಝೈನುಲ್ ಆಬಿದೀನ್ ಮುತ್ತುಕೋಯ ತಂಙಳ್ ಕಣ್ಣವಂ ಆಶೀರ್ವಚನ ನೀಡಲಿದ್ದು ಪುತ್ತೂರು ಉಪವಿಭಾಗ ಡಿವೈಎಸ್‌ಪಿ ಡಾ.ವೀರಯ್ಯ ಹಿರೇಮಠ್ ಮಳಿಗೆಯನ್ನು ಉದ್ಘಾಟಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು ವಿಶೇಷ ಅಭ್ಯಾಗತರಾಗಿ ಭಾಗವಹಿಸಲಿದ್ದು ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಮುಈನುದ್ದೀನ್ ಖಾದಿರಿ ಬೆಂಗಳೂರು ಭಾಗವಹಿಸಲಿದ್ದು ನಅತೇ ಶರೀಫ್ ಆಲಾಪನೆ ಮಾಡಲಿದ್ದಾರೆ. ಹಾಸ್ಯ ನಟ ಅರವಿಂದ ಬೋಳಾರ್ ಅವರೂ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಹನುಮಗಿರಿ ಕ್ಷೇತ್ರದ ಮಹಾಪೋಷಕರಾದ ಜಿ.ಕೆ ಮಹಬಲೇಶ್ವರ ಭಟ್, ಪುತ್ತೂರು ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ನೆ.ಮುಡ್ನೂರು ಗ್ರಾ.ಪಂ ಪಿಡಿಓ ಸಂದೇಶ್ ಕೆ.ಎನ್, ಕಾವು ಬುಶ್ರಾ ವಿದ್ಯಾಸಂಸ್ಥೆಯ ಸಂಚಾಲಕ ಬುಶ್ರಾ ಅಬ್ದುಲ್ ಅಝೀಝ್ ಗಜಾನನ ವಿದ್ಯಾಸಂಸ್ಥೆಯ ಸಂಚಾಲಕ ಶಿವರಾಮ ಪಿ, ಗಜಾನನ ವಿದ್ಯಾಸಂಸ್ಥೆಯ ಪ್ರಾಚಾರ್ಯ ಕೆ ಶ್ಯಾಮಣ್ಣ, ಪಂಚಲಿಂಗೇಶ್ವರ ದೇವಸ್ಥಾನದ ಜಾತ್ರಾ ಸಮಿತಿ ವ್ಯವಸ್ಥಾಪಕ ವಿಕ್ರಂ ರೈ ಸಾಂತ್ಯ, ನೆ.ಮುಡ್ನೂರು ಗ್ರಾ.ಪಂ ಸದಸ್ಯರಾದ ಪ್ರದೀಪ್ ರೈ ಕೆ.ಬಿ, ಸಂಶುದ್ದೀನ್ ಪಿ, ಶ್ರೀರಾಮ್ ಪಕ್ಕಳ, ಇಬ್ರಾಹಿಂ ಪಳ್ಳತ್ತೂರು, ರಾಮ ಮೇನಾಲ, ದೇಲಂಪಾಡಿ ಐಯುಎಂಎಲ್ ಅಧ್ಯಕ್ಷ ಅಶ್ರಫ್ ಚೆಂಡಮಾಲೆ, ಪುತ್ತೂರು ತಾ.ಪಂ ಮಾಜಿ ಅಧ್ಯಕ್ಷ ಹಾಜಿ ಮಹಮ್ಮದ್ ಬಡಗನ್ನೂರು, ದೇಲಂಪಾಡಿ ಗ್ರಾ.ಪಂ ಅಧ್ಯಕ್ಷ ಮುಸ್ತಫಾ ಹಾಜಿ, ಜಿ.ಪಂ ಮಾಜಿ ಸದಸ್ಯರಾದ ಅನಿತಾ ಹೇಮನಾಥ ಶೆಟ್ಟಿ, ರವಿಕಿರಣ್ ಶೆಟ್ಟಿ ಬೆದ್ರಾಡಿ, ಹಿರಾ ಖಾದರ್ ಹಾಜಿ, ಟಿ.ಎ ಅಬ್ದುಲ್ ಖಾದರ್ ಹಾಜಿ, ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಶಿವ ಎಂಟರ್‌ಪ್ರೈಸಸ್‌ನ ವಿಠಲ ಶೆಟ್ಟಿ ಎಸ್, ಹಿರಿಯ ವೈದ್ಯಾಧಿಕಾರಿಗಳಾದ ಡಾ.ಶ್ರೀಕುಮಾರ್, ಡಾ.ಉದನೇಶ್ವರ ಭಟ್, ನ್ಯಾಯವಾದಿ ಮೊಹಮ್ಮದ್ ಫವಾಝ್, ಪೂಪಿ ಸಾಫ್ಟ್ ಡ್ರಿಂಕ್ಸ್‌ನ ಮಾಲಕ ಅಬೂಬಕ್ಕರ್ ಎನ್.ಎಸ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಅಬ್ಕೋ ಗೋಲ್ಡ್ ಚಿನ್ನದ ಮಳಿಗೆಯ ಪಾಲುದಾರರು ತಿಳಿಸಿದ್ದಾರೆ. ಉದ್ಘಾಟನೆ ಪ್ರಯುಕ್ತ ಭರ್ಜರಿ ಕೊಡುಗೆ: ಅಬ್ಕೋ ಗೋಲ್ಡ್ ಮಳಿಗೆ ಶುಭಾರಂಭದ ಪ್ರಯುಕ್ತ ಕೊಡುಗೆಗಳನ್ನು ಘೋಷಿಸಿದ್ದು ಪ್ರತೀ ಖರೀದಿಗೂ ಉಚಿತ ಕೂಪನ್ ದೊರೆಯಲಿದ್ದು ಬಂಪರ್ ಡ್ರಾ ಮೂಲಕ ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಹಾಗೂ ೩೨” ಎಲ್‌ಇಡಿ ಟಿವಿ ಪಡೆಯುವ ಅವಕಾಶ ಕಲ್ಪಿಸಲಾಗಿದೆ. ನ.೨೪ರಿಂದ ಡಿ.೫ರ ವರೆಗೆ ಉಚಿತವಾಗಿ ಕಿವಿ ಹಾಗೂ ಮೂಗು ಚುಚ್ಚಿ ಕೊಡಲಾಗುತ್ತದೆ.

Read More
ಕರಾವಳಿ

ಸುಳ್ಯ: ಎಟಿಎಂ‌ ಸೆಂಟರ್ ನಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಗೆ ‌ಬ್ಯಾಟರಿ ಚಾರ್ಜ್ ಮಾಡುತ್ತಿರುವ ಆರೋಪ: ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್

ಸುಳ್ಯ ಐವರ್ನಾಡು ಗ್ರಾಮದ ಎಸ್ ಬಿ ಐ ಬ್ಯಾಂಕಿನ ಅಧಿಕಾರಿಯೋರ್ವರು ತಮ್ಮದೇ ಬ್ಯಾಂಕಿನ ಎಟಿಎಂ ಗೆ ಅಳವಡಿಸಿರುವ ವಿದ್ಯುತ್ ಪಾಯಿಂಟ್ ನಿಂದ ದಿನಂಪ್ರತಿ ತಮ್ಮ ಎಲೆಕ್ಟ್ರಿಕ್ ವಾಹನಕ್ಕೆ

Read More
ಕರಾವಳಿ

ಸುಳ್ಯ: ಗೋಣಿ ಚೀಲದಲ್ಲಿ ಯುವತಿಯ ಮೃತದೇಹ ಪತ್ತೆಯ ಸುತ್ತ ಸಂಶಯಗಳ ಹುತ್ತ..!

ಸುಳ್ಯದ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹ ಪತ್ತೆಯಾಗಿರುವ ಘಟನೆಗೆ ಸಂಬಂಧಿಸಿ ಪತಿಯೇ ಪತ್ನಿಯನ್ನು ಕೊಂದು ಪರಾರಿಯಾಗಿರುವ ಶಂಕೆ ಬಲವಾಗಿದ್ದು ಕೊಲೆಯಾದದ್ದು ಆತನ ಪತ್ನಿಯೋ ಅಥವಾ ಬೇರೆ ಯಾರಾದರೂ

Read More
ಕರಾವಳಿ

ಸುಬ್ರಹ್ಮಣ್ಯ ಗ್ರಾ.ಪಂ ಸದಸ್ಯೆ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ : ಭಾರತಿಯವರ ವಿಡಿಯೋ ವೈರಲ್

ಇತ್ತೀಚೆಗೆ ನಾಪತ್ತೆಯಾದ ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯೆ ಭಾರತಿ ಮೂಕಮಲೆಯವರ ಹೇಳಿಕೆಯ ವೀಡಿಯೋವೊಂದು ವೈರಲ್ ಆಗುತ್ತಿದೆ. ನಾನು ನಾನಾಗಿಯೇ ಬಂದಿದ್ದೇನೆ. ನನ್ನನ್ನು ಯಾರೂ ಅಪಹರಿಸಿಲ್ಲ. ನಾನು ಅವರನ್ನು ಮನೆಯ ಹತ್ರ

Read More
ಕರಾವಳಿಕ್ರೈಂ

ಸುಳ್ಯ :ಮನೆಯೊಳಗೆ ಮಹಿಳೆಯ ಮೃತದೇಹ ಪತ್ತೆ..!

ಸುಳ್ಯ ನಗರದ ಬೀರಮಂಗಲ ಪರಿಸರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದೆ. ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ

Read More
ಕರಾವಳಿ

ಯುವಜನತೆ ಗಾಂಜಾ, ಅಮಲು ಪದಾರ್ಥಗಳಿಂದ ದೂರವಿರಿ: ಪುತ್ತೂರು ತಂಙಳ್ ಕರೆ

ಪುತ್ತೂರು: ಯುವ ಸಮೂಹ ಗಾಂಜಾದಂತಹ ಅಮಲು ಪದಾರ್ಥಗಳಿಗೆ ಬಲಿಯಾಗುವ ಸುದ್ದಿಗಳು ಅಲ್ಲಲ್ಲಿ ಕೇಳಿ ಬರುತ್ತಿದ್ದು ಇದರ ವಿರುದ್ಧ ಪರಿಣಾಮಕಾರಿಯಾದ ಜಾಗೃತಿಅಗತ್ಯವಿದೆ. ಅಮಲು ಪದಾರ್ಥಗಳಿಗೆ ವಿದ್ಯಾರ್ಥಿಗಳು, ಯುವಕರು ಬಲಿಯಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಹೇಳಿದರು. ನ.19ರಂದು ಸಾರೆಪುಣಿ ಮದ್ರಸ ವಠಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಾಂಜಾದಂತಹ ಅಮಲು ಪದಾರ್ಥಗಳತ್ತ ಯುವ ಜನತೆ ಆಕರ್ಷಿತರಾಗುವುದನ್ನು ತಡೆಯುವ ಅವಶ್ಯಕತೆಯಿದ್ದು ಇಲ್ಲದೇ ಹೋದಲ್ಲಿ ಸಮಾಜಕ್ಕೂ, ಸಮುದಾಯಕ್ಕೂ ದೊಡ್ಡ ನಷ್ಟ ಉಂಟಾಗಲಿದೆ ಈ ನಿಟ್ಟಿನಲ್ಲಿ ಪ್ರತೀ ಮೊಹಲ್ಲಾಗಳಲ್ಲೂ ಈ ಬಗ್ಗೆ ಜಾಗೃತಿಯಾದರೆ ಉತ್ತಮ ಎಂದು ಅವರು ಹೇಳಿದರು. ಧಾರ್ಮಿಕ ವಿಚಾರಧಾರೆಗಳಿಂದ ಯುವ ಸಮೂಹ ದೂರ ಸರಿಯುತ್ತಿದ್ದು ಕ್ರೀಡೆ, ಮನೋರಂಜನಾ ಕ್ಷೇತ್ರಗಳಿಗೆ ಹೆಚ್ಚು ಮಹತ್ವ ನೀಡಿದಂತೆ ಕಂಡುಬರುತ್ತಿದೆ. ಇದು ಅಪಾಯಕಾರಿ ಬೆಳವಣಿಗೆಯಾಗಿದ್ದು ಇಸ್ಲಾಂ ಧರ್ಮದ ತತ್ವದಡಿಯಲ್ಲಿ ಧಾರ್ಮಿಕ ಕಾರ್ಯಗಳಲ್ಲಿ ಯುವಜನತೆ ಮುಂಚೂಣಿಯಲ್ಲಿ ಇರುವುದು ಅವಶ್ಯಕತೆಯಾಗಿದೆ ಎಂದು ಪುತ್ತೂರು ತಂಙಳ್ ಹೇಳಿದರು.

Read More
ಕರಾವಳಿ

ಸುಳ್ಯ: ಹೆರಿಗೆಯಾಗಿ 12ನೇ ದಿನ ಬಾಣಂತಿ ಮೃತ್ಯು

ಹೆರಿಗೆಯಾದ 12ನೇ ದಿನಕ್ಕೆ ಬಾಣಂತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯ ಜಟ್ಟಿಪಳ್ಳ ಸಮೀಪ ನ. 20 ರಂದು ನಡೆದಿದೆ. ಜಟ್ಟಿಪಳ್ಳದ ನಿವಾಸಿ ಲೀಲಾ ಎಂಬವರ ಪುತ್ರಿ ಗೀತಾ (30)

Read More
ಕರಾವಳಿರಾಜಕೀಯ

ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತದಿಂದ ಬೇಸತ್ತಿರುವ ಜನತೆ ಕಾಂಗ್ರೆಸ್ ಪರ ಒಲವು ತೋರುತ್ತಿದ್ದಾರೆ- ದಿವ್ಯಪ್ರಭಾ ಗೌಡ

ಕಾಂಗ್ರೆಸ್ ಗೆ ಇರುವ ಜನಬೆಂಬಲವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅನ್ಯ ಮಾರ್ಗದಿಂದ ಕಾಂಗ್ರೆಸ್ ಪಕ್ಷವನ್ನು ಕಟ್ಟಿಹಾಕುವ ಬಿಜೆಪಿಯ ಪ್ರಯತ್ನ ಹಿಂದೆಯೂ ವಿಫಲವಾಗಿದೆ, ಮುಂದೆಯೂ ಅಸಾಧ್ಯ ಎಂದು ರಾಜ್ಯ

Read More
Uncategorizedಕರಾವಳಿಕ್ರೈಂ

ಬೆಳ್ತಂಗಡಿ: ಸಂಶಯಾಸ್ಪದ ರೀತಿಯಲ್ಲಿ ಮನೆಯ ಅಂಗಳದಲ್ಲಿ ಇಬ್ಬರ ಮೃತದೇಹ ಪತ್ತೆ..!

ಬೆಳ್ತಂಗಡಿ: ತಾಲೂಕಿನ ಪುದುವೆಟ್ಟು, ಪಲ್ಲದಪಲ್ಕೆ ಎಂಬಲ್ಲಿ ಮನೆ ಅಂಗಳದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಸಾವನ್ನಪ್ಪಿದವರು ತಂದೆ ಹಾಗೂ ಮಗ ಎಂದು ತಿಳಿದು ಬಂದಿದ್ದು,

Read More
error: Content is protected !!