ಸುಳ್ಯ: ಎಟಿಎಂ ಸೆಂಟರ್ ನಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಗೆ ಬ್ಯಾಟರಿ ಚಾರ್ಜ್ ಮಾಡುತ್ತಿರುವ ಆರೋಪ: ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
ಸುಳ್ಯ ಐವರ್ನಾಡು ಗ್ರಾಮದ ಎಸ್ ಬಿ ಐ ಬ್ಯಾಂಕಿನ ಅಧಿಕಾರಿಯೋರ್ವರು ತಮ್ಮದೇ ಬ್ಯಾಂಕಿನ ಎಟಿಎಂ ಗೆ ಅಳವಡಿಸಿರುವ ವಿದ್ಯುತ್ ಪಾಯಿಂಟ್ ನಿಂದ ದಿನಂಪ್ರತಿ ತಮ್ಮ ಎಲೆಕ್ಟ್ರಿಕ್ ವಾಹನಕ್ಕೆ ಕರೆಂಟ್ ಚಾರ್ಜ್ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಾಹನಕ್ಕೆ ಚಾರ್ಜ್ ಮಾಡಿ ಕೊಳ್ಳುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಬ್ಯಾಂಕ್ ನ ಉದ್ಯೋಗಿಯೋರ್ವರು ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಗೆ ದಿನಂಪ್ರತಿ ಚಾರ್ಜ್ ಮಾಡಲು ಎಟಿಎಂ ನಲ್ಲಿರುವ ಪ್ಲಗ್ ಪಾಯಿಂಟ್ ಅನ್ನೇ ಚಾರ್ಜಿಂಗ್ ಪಾಯಿಂಟ್ ಆಗಿ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದ್ದು ಇದರಿಂದ ರೋಸಿ ಹೋದ ಸ್ಥಳೀಯ ಸಾರ್ವಜನಿಕರು ಘಟನೆಯನ್ನು ವಿಡಿಯೋ ಮೂಲಕ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇಲ್ಲಿನ ಎಟಿಎಂ ಕೂಡಾ ಕೇವಲ ಹಗಲಿನ ಅವಧಿಯಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದೆ ಎನ್ನುವ ಆರೋಪ ಕೇಳಿ ಬಂದಿದ್ದು ಅದೂ ಬ್ಯಾಂಕ್ ಅವಧಿಯಲ್ಲಿ ಮಾತ್ರ. ಇದರಿಂದ ಗ್ರಾಹಕರಿಗೂ ಕಿರಿಕಿರಿ ಆಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.