ಸುಳ್ಯ: ಲೋಕಾಯುಕ್ತ ಬಲೆಗೆ ಬಿದ್ದ ಸಂಪಾಜೆ- ಅರಂತೋಡು ಗ್ರಾಮ ಆಡಳಿತಾಧಿಕಾರಿ
ಸುಳ್ಯ: ಲೋಕಾಯುಕ್ತ ಬಲೆಗೆ ಬಿದ್ದ ಸಂಪಾಜೆ- ಅರಂತೋಡು ಗ್ರಾಮ ಆಡಳಿತಾಧಿಕಾರಿ, ಭಾರಿ ದುಡ್ಡಿಗೆ ಬೇಡಿಕೆಇಟ್ಟು ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಕಚೇರಿಗೆ ದಾಳಿ ನಡೆಸಿ ಗ್ರಾಮ
Read Moreಸುಳ್ಯ: ಲೋಕಾಯುಕ್ತ ಬಲೆಗೆ ಬಿದ್ದ ಸಂಪಾಜೆ- ಅರಂತೋಡು ಗ್ರಾಮ ಆಡಳಿತಾಧಿಕಾರಿ, ಭಾರಿ ದುಡ್ಡಿಗೆ ಬೇಡಿಕೆಇಟ್ಟು ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ಕಚೇರಿಗೆ ದಾಳಿ ನಡೆಸಿ ಗ್ರಾಮ
Read Moreಪುತ್ತೂರು: ಕಾಡುಕೋಣವೊಂದು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಆ.19ರಂದು ನರಿಮೊಗರುವಿನಲ್ಲಿ ನಡೆದಿದೆ. ಪ್ರಕಾಶ್ ಎಂಬವರ ಜಾಗದಲ್ಲಿರುವ ಬಾವಿಯಲ್ಲಿ ಬೆಳಗ್ಗಿನ ಹೊತ್ತು ಕಾಡುಕೋಣವೊಂದು ಬಿದ್ದು ಮೃತಪಟ್ಟಿರುವ ಸ್ಥಿತಿಯಲ್ಲಿ ಕಂಡು
Read Moreಪುತ್ತೂರು: ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪೋಕ್ಸೋ ಕಾಯಿದೆ ಬಗ್ಗೆ, ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ಪುತ್ತೂರು ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಮಧುಸೂಧನ್ ರಾವ್ ಮಾಹಿತಿ ನೀಡಿ ಮಾತನಾಡಿ ಅಪರಾಧ ಚಟುವಟಿಕೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಇರುತ್ತದೆ. ಎಲ್ಲ ಕಾಯಿದೆಗಳನ್ನು ಚಿಂತಕರ ಸಮ್ಮುಖದಲ್ಲಿ ಚರ್ಚಿಸಿ ಕೊನೆಗೆ ಸರಕಾರ ಅದನ್ನು ಜಾರಿಗೆ ತರುತ್ತದೆ. ಪೋಕ್ಸೋ ಕಾಯಿದೆಯೂ ಮಕ್ಕಳ ಮೇಲಿನ ಅಪರಾಧ ಚಟುವಟಿಕೆಗಳು, ದೌರ್ಜನ್ಯ ಕಡಿಮೆ ಆಗಬೇಕೆಂಬ ಹಿತ ದೃಷ್ಟಿಯಿಂದ ಸರಕಾರವು ಜಾರಿಗೆ ತಂದಿದೆ ಎಂದು ಹೇಳಿದರು. ಪುತ್ತೂರು ಮಹಿಳಾ ಪೋಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಭವಾನಿ ಮಾತನಾಡಿ ಜೆಜೆ ಆಕ್ಟ್ ಹಾಗೂ ಪೋಕ್ಸೋ ಕಾಯಿದೆ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಪೋಕ್ಸೋ ಕಾಯಿದೆ ಪ್ರಕಾರ ಆರೋಪಿತ ವ್ಯಕ್ತಿ ಆರೋಪಿಯಾಗಿರದೆ ನೇರವಾಗಿ ಅಪರಾಧಿ ಆಗುತ್ತಾನೆ, ವಿದ್ಯಾರ್ಥಿನಿಯರು ಯಾವುದೇ ಆಮಿಷಗಳಿಗೆ ಬಲಿಯಾಗದೆ, ದುರ್ವರ್ತನೆ ತೋರುವವರನ್ನು ಧೈರ್ಯದಿಂದ ಎದುರಿಸಬೇಕು ಎಂದರು. ಮಾದಕ ದ್ರವ್ಯಗಳ ಸೇವನೆ, ಮಾರಾಟ, ಎಲ್ಲವೂ ಕಾನೂನಿನಲ್ಲಿ ಅಪರಾಧ, ವಿದ್ಯಾರ್ಥಿಗಳು ಆ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಮಾತನಾಡಿ ಕಾನೂನಿನ ಬಗ್ಗೆ ಅರಿವು ಮಕ್ಕಳಲ್ಲಿ ಮೂಡಿಸಿ, ಮಾದಕ ಸೇವನೆ ಮತ್ತು ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸಿದ ಪೋಲೀಸ್ ಇನ್ಸ್ಪೆಕ್ಟರ್ ಮಧುಸೂಧನ್ ರಾವ್ ಹಾಗೂ ಸಬ್ ಇನ್ಸ್ಪೆಕ್ಟರ್ ಭವಾನಿ ಯವರನ್ನು ಅಭಿನಂದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಮ್ಯಾನೇಜರ್ ಉಮರ್ ಅಮ್ಜದಿ ಕುಕ್ಕಿಲ, ಪುತ್ತೂರು ಮಹಿಳಾ ಪೋಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಲಕ್ಷ್ಮಿ ಬಾಯ್, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮರ್ಕಝುಲ್ ಹುದಾ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂಧ್ಯಾ ಪಿ ಶೆಟ್ಟಿ ಸ್ವಾಗತಿಸಿ ವಂದಿಸಿದರು.
Read Moreಬಂಟ್ವಾಳ: ರೋಗಿಯೋರ್ವರನ್ನು ತುರ್ತಾಗಿ ಮಂಗಳೂರಿಗೆ ಸಾಗಿಸುತ್ತಿದ್ದ ಖಾಸಗಿ ಆ್ಯಂಬುಲೆನ್ಸ್ ವಾಹನವೊಂದು ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ಪಲ್ಟಿಯಾಗಿ ವಾಹನ ಚಾಲಕ ಗುರುವಾಯನಕೆರೆ ನಿವಾಸಿ ಶಬೀರ್ ಮೃತಪಟ್ಟಿರುವ ಬಗ್ಗೆ
Read Moreಬಂಟ್ವಾಳ ತಾಲೂಕಿನ ಪಡಿತರ ಚೀಟಿದಾರರಿಗೆ ವಿತರಣೆಯಾಗಲು ಭಾರತೀಯ ಆಹಾರ ಇಲಾಖೆ ನೀಡಿದ ಅಕ್ಕಿಯಲ್ಲಿ ಕೋಟ್ಯಾಂತರ ರೂ. ಮೌಲ್ಯದ ಗೋಲ್ ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ
Read Moreಪುತ್ತೂರು ಹೊರ ವಲಯದ ಮೇನಾಲ ಸರಕಾರಿ ಉ.ಹಿ.ಪ್ರಾ.ಶಾಲಾ ತರಗತಿ ಕೊಠಡಿಯೊಳಗೆ ಹಾವು ಪ್ರತ್ಯಕ್ಷಗೊಂಡು ಕೆಲಕಾಲ ಆತಂಕಕ್ಕೆ ಕಾರಣವಾದ ಘಟನೆ ಆ.17ರಂದು ನಡೆದಿದೆ. ಛಾವಣಿಯ ಮೂಲಕ ಒಳಪ್ರವೇಶಿಸಿದ ಹಾವು ಕೊಠಡಿಯ ಗೋಡೆಯ ಮೇಲೆ ಕಂಡು ಬಂದಿದ್ದು ಕೂಡಲೇ ವಿದ್ಯಾರ್ಥಿಗಳನ್ನು ತರಗತಿ ಕೊಠಡಿಯಿಂದ ಹೊರ ಕಳುಹಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ಲ ಮೆಣಸಿನಕಾನ ಅವರು ಕೂಡಲೇ ಸಂಬಂಧಪಟ್ಟವರಿಗೆ ವಿಷಯ ತಿಳಿಸಿದರು. ವಿಷಯ ತಿಳಿದ ಕೂಡಲೇ ನೆ.ಮುಡ್ನೂರು ಗ್ರಾ.ಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ, ಸದಸ್ಯ ರಾಮ ಮೇನಾಲ, ಗ್ರಾ.ಪಂ ಅಧಿಕಾರಿಗಳು, ಸಿಬ್ಬಂದಿಗಳು, ಅರಣ್ಯ ಇಲಾಖೆಯವರು, ಸ್ಥಳೀಯರು, ಹಿರಿಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು ಸ್ಥಳಕ್ಕೆ ಆಗಮಿಸಿದ್ದರು. ನಂತರ ಶೌರ್ಯ ಮತ್ತು ವಿಪತ್ತು ನಿರ್ವಹಣಾ ಘಟಕ ಈಶ್ವರಮಂಗಲ ಇದರ ಸಂಯೋಜಕರಾದ ಸುಂದರ ಜಿ ನೇತೃತ್ವದಲ್ಲಿ ಶಿವಶಂಕರ್ ಕುಲಾಲ್, ಗಣೇಶ್, ಕೃಷ್ಣ ಮುಂಡ್ಯ ಮೊದಲಾದವರು ಶಾಲಾ ಛಾವಣಿಯೊಳಗೆ ಅವಿತುಕೊಂಡಿದ್ದ ಹಾವನ್ನು ಹಿಡಿಯಲು ಯಶಸ್ವಿಯಾದರು. ನಂತರ ಮೇನಾಲ ಕ್ಲಸ್ಟರ್ ಸಿಆರ್‌ಪಿ ಜಯಂತಿ ಅವರ ಪುತ್ರಿ ಪೂರ್ಣಪ್ರಜ್ಞ ಅವರು ಹಾವನ್ನು ಕೈಯಲ್ಲಿ ಹಿಡಿದು ಹಾವಿನ ಬಗ್ಗೆ ವಿವರಣೆ ನೀಡಿದರು. ಹಾವು ಬಂದ ಕಾರಣ ಶಾಲಾ ಮಕ್ಕಳು ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು.
Read Moreಪುತ್ತೂರು: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ ಈದ್ ಮಿಲಾದ್ ಆಚರಣೆಯ ಬಗ್ಗೆ ಸಮಾಲೋಚನಾ ಸಭೆ
Read Moreಪುತ್ತೂರು: ಕೆಎಸ್‌ಆರ್‌ಟಿಸಿ ಯಲ್ಲಿ ಪುತ್ತೂರು ವಿಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಚಾಲಕ ಹುದ್ದೆ ಇರುವುದನ್ನು ಮನಗಂಡು ಈ ಹುದ್ದೆಗೆ ದ ಕ ಜಿಲ್ಲೆಯವರನ್ನೇ ನೇಮಕವಾಗಬೇಕು ಎಂಬ ಉದ್ದೇಶದಿಂದ
Read Moreಪುತ್ತೂರು: ಮುಂಡೂರು ಗ್ರಾಮ ಪಂಚಾಯತ್ ನ ಎರಡನೇ ಅವಧಿಗೆ ಅಧ್ಯಕ್ಷರಾಗಿ ಚಂದ್ರಶೇಖರ್ ಎನ್ ಎಸ್ ಡಿ ಹಾಗೂ ಉಪಾಧ್ಯಕ್ಷರಾಗಿ ಯಶೋದ ಅವರು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಯಶೋದ ಅವರು
Read Moreಕುಂಬ್ರ: ಶೇಖಮಲೆಯ ಸಮೀಪದ ಅರಿಯಡ್ಕ ಜಮಾಅತ್ ಗೆ ಒಳಪಟ್ಟ ದರ್ಖಾಸ್ ನಿವಾಸಿ ಮುಹಮ್ಮದ್ (83. ವ) ಹೃದಯಾಘಾತದಿಂದ ನಿಧನರಾದರು. ವೃತ್ತಿಯಲ್ಲಿ ಕೃಷಿಕರಾಗಿದ್ದ ಇವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ
Read More