ಒಳಮೊಗ್ರು ವಲಯ ಕಾಂಗ್ರೆಸ್‌ನಿಂದ ಕುಂಬ್ರದಲ್ಲಿ ಎಸ್.ಐ.ಆರ್ ಮಾಹಿತಿ ಕೇಂದ್ರ ಉದ್ಘಾಟನೆ
ಪುತ್ತೂರು: ಒಳಮೊಗ್ರು ವಲಯ ಕಾಂಗ್ರೆಸ್ ವತಿಯಿಂದ ಎಸ್.ಐ.ಆರ್ ಮಾಹಿತಿ ಕೇಂದ್ರ ಕುಂಬ್ರದಲ್ಲಿರುವ ಒಳಮೊಗ್ರು ಗ್ರಾ.ಪಂ ಸಮೀಪ ಜು.೧೧ರಂದು ಉದ್ಘಾಟನೆಗೊಂಡಿತು. ಕಾಂಗ್ರೆಸ್ ರಾಜ್ಯ ಪ್ರಚಾರ ಸಮಿತಿಯ ಮುಖಂಡ ಶಶಿಕಿರಣ್ ರೈ ನೂಜಿಬೈಲು ಉದ್ಘಾಟಿಸಿದರು.

ಕುಂಬ್ರ ದುರ್ಗಾಪ್ರಸಾದ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆದಂಬಾಡಿ ವಯಲ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ, ಕೆದಂಬಾಡಿ ಗ್ರಾ.ಪಂ ಮಾಜಿ ಸದಸ್ಯ ಮೆಲ್ವಿನ್ ಮೊಂತೆರೋ, ಕುಂಬ್ರ ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ, ಒಳಮೊಗ್ರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಮಾಜಿ ಸದಸ್ಯರಾದ ಶೀನಪ್ಪ ನಾಯ್ಕ, ವಿನೋದ್ ಶೆಟ್ಟಿ ಮುಡಾಲ, ಬೂತ್ ಅಧ್ಯಕ್ಷ ರಝಾಕ್ ಪರ್ಪುಂಜ, ಹಂಝ ಉಜಿರೋಡಿ, ಅಝೀಝ್ ನೀರ್ಪಾಡಿ, ಮನೋಜ್ ಅಜ್ಜಿಕಲ್ಲು, ಬಿ.ಎಲ್.ಎ.ಗಳಾದ ಗೋವಿಂದ ನಾಯ್ಕ, ಮುಹಮ್ಮದ್ ಬೊಳ್ಳಾಡಿ, ಶಾಫಿ ಅಡ್ಕ, ರಫೀಕ್ ಕಡ್ತಿಮಾರ್, ಮಜೀದ್ ಅಲಂಗೂರು ಮತ್ತಿತರರು ಉಪಸ್ಥಿತರಿದ್ದರು. ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಚೆನ್ನ ಕುಂಬ್ರ ವಂದಿಸಿದರು.




