ಕರಾವಳಿ

ಪ್ರತಿಷ್ಠಿತ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಸದಸ್ಯರಾಗಿ ಮಹಮ್ಮದ್ ಕುಕ್ಕುವಳ್ಳಿ ಆಯ್ಕೆಪುತ್ತೂರು: ಉದ್ಯಮಿ, ಸಮಾಜ ಸೇವಕ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅನೇಕ ಸಂಘ ಸಂಸ್ಥೆಗಳಲ್ಲಿ ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಮಹಮ್ಮದ್ ಹಾಜಿ ಕುಕ್ಕುವಳ್ಳಿ ಅವರಿಗೆ ಇದೀಗ ಮತ್ತೊಂದು ಗೌರವದ ಸ್ಥಾನಮಾನ ಸಿಕ್ಕಿದಂತಾಗಿದೆ.

‘ಸೂರಿಲ್ಲದವರಿಗೊಂದು ಆಸರೆ’ ಎನ್ನುವ ಸಂಸ್ಥೆ ಕಟ್ಟಿಕೊಂಡು ಸುಮಾರು 70ಕ್ಕೂ ಅಧಿಕ ಬಡ ಕುಟುಂಬಳಿಗೆ ಸೂರು ಹಾಗೂ ಮೇಲ್ಛಾವಣಿ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರು ಬಡವರ ಪರವಾದ ಸೇವಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಪ್ರಸ್ತುತ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದ.ಕ ಜಿಲ್ಲಾಧ್ಯಕ್ಷರಾಗಿರುವ ಇವರು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ತಾವು ಸಮಾಜಪರವಾಗಿ ಸಲ್ಲಿಸಿರುವ ಸೇವೆ ಅನೇಕ ಪ್ರಶಸ್ತಿಗಳನ್ನು ಕೂಡಾ ಪಡೆದುಕೊಂಡಿದ್ದಾರೆ. ಇವರು ದಿ.ಯೂಸುಫ್ ಮತ್ತು ಮರಿಯಮ್ಮ ದಂಪತಿಯ ಪುತ್ರ.

Leave a Reply

Your email address will not be published. Required fields are marked *

error: Content is protected !!